At Hasiru Dala, we believe in the power of community to bring change. With this approach, we believe that it is the community’s knowledge and leadership that facilitates transformation and brings systematic change.
ತ್ಯಾಜ್ಯ ಆಯುವವರು ಮತ್ತು ಘನ ತ್ಯಾಜ್ಯ ನಿರ್ವಹಣೆಯ ಕುರಿತು ಮಾಡಿರುವ ಕ್ರಿಯಾ ಸಂಶೋಧನೆಯು ನಮ್ಮ ಕಾರ್ಯವಿಧಾನದಲ್ಲಿ ಒಂದು ವೈಜ್ಞಾನಿಕ ಮನೋವೃತ್ತಿಯನ್ನು ಬಿತ್ತಿದೆ, ಕ್ಷೇತ್ರ ಮಟ್ಟದಲ್ಲಿ ಕಂಡುಕೊಂಡ ದತ್ತಾಂಶಗಳ ವಿಶ್ಲೇಷಣೆಯಿಂದ ಕಾರ್ಯವಿಧಾನವು ವಿಕಸಿತವಾಗುವಂತಾಗಿದೆ. ಸ್ಥಳೀಯ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸಮಾನಮನಸ್ಕ ಸಂಸ್ಥೆಗಳೊಂದಿಗಿನ ಸಹಯೋಗವು ಹಸಿರು ದಳ ಹಕ್ಕೊತ್ತಾಯ ಪ್ರಯತ್ನಗಳಿಗೆ ಇಂಧನದಂತೆ ಕೆಲಸ ಮಾಡಿತು, ಇದು ತ್ಯಾಜ್ಯ ಆಯುವವರ ಹಕ್ಕುಗಳು ಮತ್ತು ಬದುಕುಗಳಲ್ಲಿ ಪ್ರಚಂಡವಾದ ಬದಲಾವಣೆಯನ್ನು ತಂದಿತು. ನಾಗರಿಕರು, ಆಂದೋಲನಕಾರರು ಮತ್ತು ಪರಿಸರವಾದಿಗಳೊಂದಿಗೆ ಕೆಲಸ ಮಾಡುವರಿಂದ ಹಲವು ನಗರಗಳಲ್ಲಿ ತ್ಯಾಜ್ಯ ಆಯುವವರನ್ನು ಘನ ತ್ಯಾಜ್ಯ ನಿರ್ವಹಣೆಯ ಒಟ್ಟು ವ್ಯವಸ್ಥೆಯಲ್ಲಿ ಏಕೀಕರಿಸುವ ಕನಸು ನನಸಾಗಲು ಸಹಾಯಕವಾಯಿತು.
ಹಸಿರು ದಳ ಎಲ್ಲ ಬಾಧ್ಯಸ್ಥರನ್ನು, ವಿಶಿಷ್ಟವಾಗಿ ಅನೌಪಚಾರಿಕ ತ್ಯಾಜ್ಯ ಆರ್ಥಿಕತೆಯಲ್ಲಿ ಮತ್ತು ಸಾಮಾನ್ಯವಾಗಿ ಘನ ತ್ಯಾಜ್ಯ ನಿರ್ವಹಣೆಯಲ್ಲಿ ಒಳಗೊಂಡೊಂಡಿರುವ ತ್ಯಾಜ್ಯ ಆಯುವವರು, ಕಾರ್ಮಿಕರು ಮತ್ತು ವ್ಯಾಪಾರಸ್ಥನ್ನು ನಂಬಿಕೆ ಮತ್ತು ಒಗ್ಗಟ್ಟಿನ ಆಧಾರದ ಮೇಲೆ ಒಗ್ಗೂಡಿಸುತ್ತದೆ.
Hasiru Dala hopes to bring waste workers out of the shadows, into the light. We approach our vision of success with a day in mind, in a decade or so, when our work in its current form will be irrelevant. Waste pickers would have achieved social equity and economic mobility and a new vision and challenge will steer the organisation.
ನಮ್ಮ ಕಾರ್ಯದ ಬೀಜ ಪರಾನುಭೂತಿ, ಇತರರ ಕುರಿತು ಸಹ-ಅನುಭೂತಿ. ಇತರರೊಂದಿಗೆ, ಮುಖ್ಯವಾಗಿ ಉಪೇಕ್ಷಿತರೊಂದಿಗೆ ಯಾವುದೇ ಪೂರ್ವಾಗ್ರಹವಿಲ್ಲದೆ, ಪೂರ್ವಕಲ್ಪಿತ ಭಾವನೆಗಳಿಲ್ಲದೇ ನಮ್ಮನ್ನು ಗುರುತಿಸಿಕೊಳ್ಳಲು ಇದು ಸಹಾಯಕವಾಗಿದೆ.
ಹಸಿರು ದಳ ಸರ್ವರ ಒಳಗೊಳ್ಳುವಿಕೆಯಲ್ಲಿ ನಂಬಿಕೆ ಇರಿಸಿದೆ ಮತ್ತು ಬದುಕಿನ ಎಲ್ಲಾ ವಲಯಗಳಿಂದ ಜನರನ್ನು ಸ್ವಾಗತಿಸುತ್ತದೆ. ಜಾತಿ, ವರ್ಗ, ಧರ್ಮ, ಲಿಂಗ, ಲೈಂಗಿಕತೆ, ವಯಸ್ಸು ಇತ್ಯಾದಿಗಳ ಆಧಾರದ ಮೇಲೆ ತಾರತಮ್ಯಕ್ಕೆ ನಮ್ಮ ಸಂಸ್ಥೆಯಲ್ಲಿ ಅವಕಾಶವಿಲ್ಲ. ಎಲ್ಲರನ್ನೂ ಸಮನವಾಗಿ ಕಾಣಲಾಗುತ್ತದೆ.
ಯಾವುದೇ ವ್ಯಕ್ತಿಯ ಕುರಿತು ಪೂರ್ವಾಭಿಪ್ರಾಯ ಇಲ್ಲದ ವರ್ತನೆಯನ್ನು ಹಸಿರು ದಳ ಉತ್ತೇಜಿಸುತ್ತದೆ. ನಮ್ಮ ದೈನಂದಿನ ಜೀವನದಲ್ಲಿ ವ್ಯಕ್ತಿಗಳು ಮತ್ತು ವಿಚಾರಗಳ ಬಗ್ಗೆ ಹೆಜ್ಜೆ ಹೆಜ್ಜೆಗೆ ಮುಂದು ಮುಂದಾಗಿ ಅಭಿಪ್ರಾಯ ತಾಳುತ್ತಿರುತ್ತೇವೆ. ಆದರೆ, ಅಂಥ ಒಂದು ಪೂರ್ವಾಗ್ರಹ ನಮ್ಮ ಕೆಲಸಕಾರ್ಯಗಳಲ್ಲಿ, ಸಹೋದ್ಯೋಗಿಗಳೊಂದಿಗಿನ ಸಂಬಂಧಗಳಲ್ಲಿ ಅವು ಅಡ್ಡಿಬಾರದ ಹಾಗೆ ನೋಡಿಕೊಳ್ಳುವುದನ್ನು ಸಂಸ್ಥೆ ಉತ್ತೇಜಿಸುತ್ತದೆ.
ಹಸಿರು ದಳ ಯಾವುದೇ ವಿಚಾರದ ಬಗ್ಗೆ ನಿರ್ಧಾರ ತಾಳುವುದರಲ್ಲಿ ಸಂಬಂಧ ಪಟ್ಟ ಎಲ್ಲರನ್ನೂ ಒಳಗೊಳಿಸಿಕೊಳ್ಳುವುದಕ್ಕೆ ಹೆಚ್ಚಿನ ಮಾನ್ಯತೆ ನೀಡುತ್ತದೆ.
ಕೆಲಸದ ವೇಳೆಯನ್ನು ಸಾಮಾನ್ಯವಾಗಿ ಕಠಿಣವಾಗಿ ಕಡ್ಡಾಯವಾಗಿಸಿಲ್ಲ. ಹಸಿರು ದಳದಲ್ಲಿ ಉದ್ಯೋಗಿಗಳು ವೈಯಕ್ತಿಕವಾಗಿ ತಮಗೆ ತಾವು ಮತ್ತು ಸಂಸ್ಥೆಗೆ ಹೊಣೆಗಾರರಾಗಿರುತ್ತಾರೆ ಎಂದು ನಾವು ನಂಬುತ್ತೇವೆ. ಧ್ಯೇಯಕ್ಕೆ ತೋರುವ ಬದ್ಧತೆ ಕಡ್ಡಾಯ- ಸಮಯದ ಕುರಿತ ಸ್ವಾತಂತ್ರ್ಯವು ಹೆಚ್ಚು ಹೊಣೆಗಾರಿಕೆಯನ್ನು ತರುತ್ತದೆ ಎಂಬ ನಂಬಿಕೆ.
ಹಸಿರು ದಳ ಅಹಿಂಸಾ ತತ್ತ್ವವನ್ನು ಅನುಸರಿಸುತ್ತದೆ ಮತ್ತು ಯಾವುದೇ ಬಗೆಯ ಹಿಂಸೆಯನ್ನು ಉತ್ತೇಜಿಸುವುದಿಲ್ಲ. ಯಾವುದೇ ನೌಕರರು ಯಾವುದೇ ಬಗೆಯ ಹಿಂಸೆಯಲ್ಲಿ ತೊಡಗಿರುವುದು ಕಂಡುಬಂದಲ್ಲಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಹಸಿರು ದಳಕ್ಕೆ ಎಲ್ಲರಿಗೂ ಸಮಾನತೆ ಎನ್ನುವುದರಲ್ಲಿ ನಂಬಿಕೆ ಇದೆ. ಕೆಲಸಜಾಗದಲ್ಲಿ ’ಸರ್/ಮ್ಯಾಡಮ್’ ಎಂಬ ರೀತಿಯ ಸಂಬೋಧನೆ ಬೇಕಾಗಿಲ್ಲ. ಇದರಿಂದಾಗಿ, ವ್ಯಕ್ತಿಯ ಜಾತಿ, ವರ್ಗ, ವಯಸ್ಸು, ಧರ್ಮ, ಲಿಂಗ, ಲೈಂಗಿಕ ಪ್ರವೃತ್ತಿಯ ಭೇದವಿಲ್ಲದೇ ಎಲ್ಲರನ್ನೂ ಸಮಾನವಾಗಿ ಭಾವಿಸುವಲ್ಲಿ ಹೆಚ್ಚಿನ ಜವಾಬ್ದಾರಿ ಮೂಡುತ್ತದೆ.