ನಮ್ಮ ಬಗ್ಗೆ

ನಾವುಬೀರಿರುವಪರಿಣಾಮ

Hasiru Dala’s goals include the creation of opportunities for those who would like to take on jobs with predictable income. The following graph shows our impact in terms of the number of jobs with a predictable income we have created for former waste pickers in the public sector as well as the private sector.

Hasiru Dala Our Impact Jobs Piechart
  • ಬಿಬಿಎಂಪಿ
  • ಡಿಡಬ್ಲ್ಯೂಸಿಸಿ ನಿರ್ವಾಹಕ
  • ಸಾರ್ವಜನಿಕ ವಲಯ
  • ಖಾಸಗಿ ವಲಯ: ಎಚ್‌ಡಿಐ ವಿಶೇಷ
  • ಖಾಸಗಿ ವಲಯ : ಇತರರು
  • ಸ್ವ-ಉದ್ಯೋಗಿ
ID Impact
11,380

ಔದ್ಯೋಗಿಕ ಗುರುತಿನ ಕಾರ್ಡುಗಳು

ತ್ಯಾಜ್ಯ ಆಯುವವರು ನಗರದ ನಿವಾಸಿಗಳು ಎಂದು ಅಧಿಕೃತವಾಗಿ ಗುರುತಿಸುವ ಸಲುವಾಗಿ ನಗರ ಸ್ಥಳೀಯ ಸಂಸ್ಥೆಗಳು ಅಥವಾ ಮುನಿಸಿಪಲ್ ಪ್ರಾಧಿಕಾರಗಳು ಅವರಿಗೆ ಔದ್ಯೋಗಿಕ ಗುರುತಿನ ಕಾರ್ಡುಗಳನ್ನು ನೀಡಿವೆ. ಈ ಕಾರ್ಡುಗಳು ಅವರ ಅಧಿಕೃತ ಗುರುತಾಗಿ ಕೆಲಸ ಮಾಡುತ್ತವೆ, ಇತರ ಸಾಮಾಜಿಕ ಭದ್ರತೆಗಳಿಗಾಗಿ ಅರ್ಜಿಯನ್ನು ಸಲ್ಲಿಸುವಾಗ ಇವು ವಿಳಾಸದ ಪುರಾವೆಗಳಾಗಿ ಬಳಕೆಯಾಗುತ್ತವೆ. ಇವುಗಳಿಂದ ಅವರಿಗೆ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ದೊರಕುತ್ತದೆ. ಅವರು ನಗರಕ್ಕಾಗಿ ಮಾಡುತ್ತಿರುವ ಕೆಲಸವು ಗುರುತಿಸಲ್ಪಡುತ್ತದೆ.

Reenroll Impact
272

ಪ್ರವೇಶ ಮತ್ತು ಮರುದಾಖಲಾತಿ

ತ್ಯಾಜ್ಯ ಆಯುವವರ ಮಕ್ಕಳಲ್ಲಿ ಹಲವರು ಮೊದಲ ಪೀಳಿಗೆಯ ವಿದ್ಯಾರ್ಥಿಗಳು. ಶಾಲೆಗೆ ಹೋಗುವ ಅವಕಾಶಗಳಿಲ್ಲ, ಜೊತೆಗೆ ಕುಟುಂಬದ ಆದಾಯಕ್ಕೆ ಪೂರಕವಾಗುವ ಹಾಗೆ ಮಕ್ಕಳೂ ದುಡಿಯಬೇಕಾಗುತ್ತದೆ. ಈ ಕಾರಣಕ್ಕಾಗಿ ಮಕ್ಕಳು ಶಾಲೆಗೆ ಸೇರುತ್ತಿರಲಿಲ್ಲ; ಸೇರಿದ್ದರೂ ಮಧ್ಯದಲ್ಲಿ ಬಿಟ್ಟುಬಿಡುತ್ತಿದ್ದರು. ಬುಗುರಿ ಮಕ್ಕಳ ಕಾರ್ಯಕ್ರಮವು ಶಾಲೆಯಿಂದ ಹೊರಗಿರುವ ಮಕ್ಕಳನ್ನು ಗುರುತಿಸಿ ಅವರ ಶಾಲೆಗೆ ದಾಖಲು ಮಾಡಿಸುತ್ತದೆ; ಶಾಲೆಯನ್ನು ಮಧ್ಯದಲ್ಲಿ ಬಿಟ್ಟ ಮಕ್ಕಳನ್ನೂ ಮರುದಾಖಲೆ ಮಾಡಿಸುತ್ತದೆ. “ಪ್ರತಿ ಮಗುವೂ ಶಾಲೆಯಲ್ಲಿ” ಎಂಬ ಧ್ಯೇಯ ಇದಾಗಿದೆ.

Scholarship Impact
1,597

ವಿದ್ಯಾರ್ಥಿ ವೇತನಗಳು ಮತ್ತು ಸಾಲಗಳು

ಸರಕಾರಿ ಶಾಲೆಗಳಲ್ಲಿಯೂ ಆಗುವ ಕೆಲವು ಸಾಂದರ್ಭಿಕ ವೆಚ್ಚಗಳನ್ನು ಸರಕಾರವು ಭರಿಸುವುದಿಲ್ಲ. ಆದ್ದರಿಂದ ’ಸ್ವಚ್ಛಗೊಳಿಸುವ ಕೆಲಸ ಮಾಡುತ್ತಾ ಆರೋಗ್ಯ ಸಂಕಷ್ಟಗಳಿಗೆ ಗುರಿಯಾಗಬಹುದಾದ ಉದ್ಯೋಗಗಳಲ್ಲಿ ನಿರತರಾಗಿರುವ ಪೋಷಕರ ಮಕ್ಕಳು ಮ್ಯಾಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಗಳಿಗೆ ಅರ್ಥರಾಗುವಂತೆ ಮಾಡಲು” ಹಸಿರು ದಳ ಆಂದೋಲನವನ್ನು ಮಾಡಿತು. ಮಕ್ಕಳು ಶಾಲೆಗಳನ್ನು ಸೇರಲು ಅನುಕೂಲವಾಗುವಂತೆ ವಿದ್ಯಾರ್ಥಿವೇತನಗಳನ್ನು ನೀಡಲು ಸಾಧ್ಯವಾಗುವಂತೆ ಖಾಸಗಿ ಮತ್ತು ಇತರ ಧನಸಹಾಯ ಪಡೆಯುವ ಪ್ರಯತ್ನವನ್ನೂ ಮಾಡಲಾಗುತ್ತಿದೆ.

Social Security Impact 
16,169

ಸಾಮಾಜಿಕ ಭದ್ರತಾ ಹಕ್ಕುಗಳನ್ನು ಪಡೆಯಲಾಯಿತು

ಅನೌಪಚಾರಿಕ ವಲಯದಲ್ಲಿ ದುಡಿಯುವವರಿಗೆ, ಸಾಮಾಜಿಕ ಭದ್ರತಾ ಹಕ್ಕುಗಳು, ದಿನಗೂಲಿ ಮತ್ತು ಬದುಕಲು ಬೇಕಾದ ಕನಿಷ್ಟ ಆದಾಯಗಳು ಇವುಗಳ ನಡುವಿನ ಕಂದಕವನ್ನು ಮುಚ್ಚುತ್ತವೆ. ಅವರಾಡುವ ಭಾಷೆ ಮತ್ತು ಡಿಜಿಟಲ್ ಅಡೆತಡೆಗಳು ತ್ಯಾಜ್ಯ ಅಯುವವರು(ಮತ್ತು ಅವರ ಕುಟುಂಬಗಳು) ಸಾಮಾಜಿಕ ಭದ್ರತೆ ಅಧಿಕಾರಗಳನ್ನು ಬಳಸುವಲ್ಲಿ ಅಡ್ಡಿಯಾಗುತ್ತವೆ. ಹಸಿರು ದಳ, ಇಲ್ಲಿ ಕಾರ್ಯಾಚರಣೆ ನಡೆಸಿ, ಪ್ಯಾನ್ ಕಾರ್ಡು, ಆಧಾರ್ ಕಾರ್ಡುಗಳಿಗೆ ಅರ್ಜಿ ಸಲ್ಲಿಸುವುದು, ಪಿಂಚಣಿಗಳು ಮತ್ತು ಇತರ ಕಾರ್ಯಯೋಜನೆಗಳ ಪ್ರಯೋಜನಗಳು ಇವರಿಗೆ ದಕ್ಕುವಂತೆ ಮಾಡುತ್ತಿದೆ.

31806

ನಿರ್ವಹಿಸಲಾದ ಅಜೈವಿಕ ತ್ಯಾಜ್ಯ (ಟನ್ನುಗಳು)

ಇಲ್ಲಿರುವ ಮಾಹಿತಿಯನ್ನು ಬಳಸಿ, ಡಿಡಬ್ಲ್ಯುಸಿಸಿಗಳ ದಾಖಲೆಗಳಿಂದ ಕೆಳಗಿನ ಅಂಕಿಅಂಶಗಳನು ಗಣಿಸಲಾಗಿದೆ link.

Hasiru Dala

140,584

TREES SAVED
per ton of Paper Recycled

Hasiru Dala

62,441,052 KWh

ELECTRICITY SAVED
per ton of Plastic Recycled

Hasiru Dala

120,228 KWh

ELECTRICITY SAVED
per ton of Glass Recycled

Hasiru Dala

236,506 cubic meter

LANDFILL AREA SAVED
per ton Plastic Diverted

Hasiru Dala

27,731 cubic meter

LANDFILL AREA SAVED
per Paper Diverted

Hasiru Dala Impact

2,782 cubic meter

LANDFILL AREA SAVED
per ton Metal Diverted

Hasiru Dala Impact

4,174 cubic meter

LANDFILL AREA SAVED
per ton Glass Diverted

Hasiru Dala Impact

85,320 litre

FUEL SAVED
per ton of Wet & Dry Waste Diverted

ಹಸಿರು ದಳ ಪ್ರಚಲಿತ ಬೆಂಗಳೂರು ನಗರದಲ್ಲಿ 33 ಡಿಡಬ್ಲ್ಯುಸಿಸಿಗಳಿಗೆ ಬೆಂಬಲವನ್ನು ನೀಡುತ್ತಿದೆ; ಇದರ ಮೂಲಕ ಅಜೈವಿಕ ತ್ಯಾಜ್ಯ ಭೂಭರ್ತಿ ತಾಣಗಳನ್ನು ತಲುಪುವ ಬದಲು ಪುನರುತ್ಪಾದನೆಯಲ್ಲಿ ಬಳಕೆಯಾಗುವಂತೆ ಮಾಡಿದೆ. ಇದು ಆರ್ಥಿಕತೆಯ ಸರಪಳಿಯುದ್ದಕ್ಕೂ ವೆಚ್ಚಗಳನ್ನು ಉಳಿತಾಯ ಮಾಡುವುದಕ್ಕೆ ಸಹಾಯಕವಾಗಿದೆ: ತ್ಯಾಜ್ಯ ಬೇರೆ ಕಡೆ ಹೋಗಿರುವುದರಿಂದ ಭೂಭರ್ತಿಗಳು ಬಳಕೆಯಾಗದೇ ಉಳಿಯುತ್ತವೆ, ಪ್ಲ್ಯಾಸ್ಟಿಕ್ ಉತ್ಪಾದನೆಗಾಗಿ ವರ್ಜಿನ್ ತೈಲದ ಅಗತ್ಯವಿರುವುದಿಲ್ಲ. ಪ್ರಾಸಂಗಿಕ ಉತ್ಪಾದನಾ ವೆಚ್ಚವು ಕಡಿಮೆಯಾಗುತ್ತದೆ.

Kannada