ನಮ್ಮ ಕುರಿತು

ಹಸಿರು ದಳ

ಹಸಿರು ದಳ ಎಂದರೆ ಹಸಿರು ಬಲ, ಇದೊಂದು ಸಾಮಾಜಿಕ ಪ್ರಭಾವವನ್ನು ಉಂಟುಮಾಡುವ ಸಂಸ್ಥೆ. ಇದು, ತ್ಯಾಜ್ಯ ಆಯುವವರು ಮತ್ತು ಇತರ ತ್ಯಾಜ್ಯಕಾರ್ಯಕರ್ತರು ಘನತೆಯಿಂದ ಬದುಕುವುದನ್ನು ಖಚಿತಪಡಿಕೊಳ್ಳುವ ಉದ್ದೇಶದಿಂದ ಅವರೊಂದಿಗೆ ಕೆಲಸ ಮಾಡುತ್ತದೆ.

ಇನ್ನಷ್ಟು ಓದಿ

ತ್ಯಾಜ್ಯ ಆಯುವವರ

3700

ಹೆಚ್ಚು ಮಕ್ಕಳು ಬುಗುರಿ ಮಕ್ಕಳ ಕಾರ್ಯಕ್ರಮದಿಂದ ಬೆಂಬಲ ಪಡೆದಿದ್ದಾರೆ.

ತ್ಯಾಜ್ಯ ಆಯುವವರ

11300

waste pickers have been given occupational identity cards in Karnataka and Andhra Pradesh.

ತ್ಯಾಜ್ಯ ಆಯುವವರ

84 ಕೋಟಿಗೂ ಹೆಚ್ಚು

ಬೆಂಗಳೂರಿನ 15,000 ತ್ಯಾಜ್ಯ ಆಯುವವರ ಪರಿಶ್ರಮದಿಂದಾಗಿ ಸ್ಥಳೀಯ ಸರಕಾರಕ್ಕೆ ವಾರ್ಷಿಕ

ತ್ಯಾಜ್ಯ ಆಯುವವರ

1000

ಹೆಚ್ಚು ಮಕ್ಕಳು ಬುಗುರಿ ಮಕ್ಕಳ ಕಾರ್ಯಕ್ರಮದಿಂದ ಬೆಂಬಲ ಪಡೆದಿದ್ದಾರೆ.

ತ್ಯಾಜ್ಯ ಆಯುವವರ

10000

ಹೆಚ್ಚು ತ್ಯಾಜ್ಯ ಆಯುವವರಿಗೆ ವೃತ್ತಿ ಗುರುತಿನ ಕಾರ್ಡುಗಳನ್ನು ನೀಡಲಾಗಿದೆ

ತ್ಯಾಜ್ಯ ಆಯುವವರ

84 ಕೋಟಿಗೂ ಹೆಚ್ಚು

ಬೆಂಗಳೂರಿನ 15,000 ತ್ಯಾಜ್ಯ ಆಯುವವರ ಪರಿಶ್ರಮದಿಂದಾಗಿ ಸ್ಥಳೀಯ ಸರಕಾರಕ್ಕೆ ವಾರ್ಷಿಕ

ವಿಶಿಷ್ಟ ವಿಡಿಯೋ

ನಳಿನಿ ಶೇಖರ್, ಕಾರ್ಯಕಾರಿ ನಿರ್ದೇಶಕರು ಮತ್ತು ಹಸಿರು ದಳದ ಸಹಸಂಸ್ಥಾಪಕರು, ಸಂಸ್ಥೆಯ ಪಯಣ, ಬೆಳವಣಿಗೆಯ ಕುರಿತು ಮಾತಾಡುತ್ತಾರೆ.

ವಿಡಿಯೋ: ಸೃಷ್ಟಿ ಫಿಲ್ಮ್ಸ್

ಅಗೋಚರತೆಯಿಂದ ಅಸ್ಮಿತೆಗೆ

ನಮ್ಮ ಉಪಕ್ರಮಗಳು

DWCC Hasiru Dala

ಜೀವನೋಪಾಯಗಳು

ತ್ಯಾಜ್ಯ ಆಯುವವರ ಕಾಯಕಕ್ಕೊಂದು ಘನತೆಯನ್ನು ಒದಗಿಸುವುದರ ಸುತ್ತ ನಮ್ಮ ಪರಿಶ್ರಮವು ಕೇಂದ್ರೀಕೃತವಾಗಿರುತ್ತದೆ. ತ್ಯಾಜ್ಯ ಆಯುವವರು ತಮ್ಮ ಜೀವನೋಪಾಯದಲ್ಲಿ ಘನತೆಯನ್ನು ಹೊಂದಲು, ಕಾಣಲು, ಅವರ ಹಣಕಾಸು ಸ್ಥಿರತೆಯನ್ನು ಹೆಚ್ಚಿಸುವ ಮತ್ತು ಅವರ ಕೆಲಸದ ಪರಿಸರವನ್ನು ಸುಧಾರಿಸುವ ಮಾರ್ಗವನ್ನು ನಾವು ಅನುಸರಿಸಿದೆವು.

ಇನ್ನಷ್ಟು ಓದಿ
Hasiru Dala Hasiru Mane Housing

ವಸತಿ

ಹತ್ತು ವರ್ಷಗಳ ಅನುಭವದಿಂದ, ಕುಟುಂಬದ ಸ್ಥಿರತೆ ಮತ್ತು ಸಾಮಾಜಿಕ ಭದ್ರತೆಯ ಯೋಜನೆಗಳ ಪ್ರಯೋಜನ ಸಿಗುವುದಕ್ಕೆ ಸಾಧ್ಯವಾಗುವುದು ಅವರಿಗೆ ಶಾಶ್ವತ ವಸತಿ ಇದ್ದಾಗಲೇ ಎಂಬುದು ನಮಗೆ ಗೊತ್ತಾಗಿದೆ. ಈ ಸಮುದಾಯದವರಿಗೆ ಕೈಗೆಟುಕುವ ಬೆಲೆಯಲ್ಲಿ ಸುಸ್ಥಿರವಾದ ವಸತಿ ಸೌಕರ್ಯ ಅಗತ್ಯ ಎಂಬುದು ಹಸಿರು ದಳದ ನಂಬಿಕೆಯಾಗಿದೆ.

ಇನ್ನಷ್ಟು ಓದಿ
Hasiru Dala Social Security

ಸಾಮಾಜಿಕ ಭದ್ರತೆ

ಹಸಿರು ದಳ ಯಾವುದೇ ನಗರದಲ್ಲಿ ಕೆಲಸ ಮಾಡಲಿ, ನಮ್ಮ ಮೊದಲ ಹೆಜ್ಜೆ ಎಂದರೆ ತ್ಯಾಜ್ಯ ಆಯುವವರಿಗೆ ಗುರುತಿನ ಚೀಟಿಯನ್ನು ನೀಡುವ ಬೇಡಿಕೆಯೊಂದಿಗೆ ಸ್ಥಳೀಯ ಸರಕಾರವನ್ನು ಭೇಟಿಯಾಗುವುದು.

ಇನ್ನಷ್ಟು ಓದಿ
Hasiru Dala Training

ತರಬೇತಿ ಕಾರ್ಯಕ್ರಮ

ತ್ಯಾಜ್ಯ ನಿರ್ವಹಣೆಯ ವಲಯದಲ್ಲಿ ತೊಡಗಿರುವ ಪ್ರತಿಯೊಬ್ಬ ಬಾಧ್ಯಸ್ಥರು ತಮ್ಮ ವರ್ತನೆಗಳನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ ಎಂಬುದು ಇಲ್ಲಿರುವ ಬಹು ದೊಡ್ಡ ಸವಾಲಾಗಿದೆ. ಸಹಜವಾಗಿಯೇ ಇದು ಹೇಳುವಷ್ಟು ಸುಲಭವಲ್ಲ. ಇದು ಬಹಳಷ್ಟು ಸಮಯ ಹಿಡಿಯುವ ಪ್ರಕ್ರಿಯೆ, ಅದ್ದರಿಂದ ಈ ಕುರಿತು ನಾವು ತುರ್ತಾಗಿ ಕಾರ್ಯಪ್ರವೃತ್ತರಾಗಬೇಕು.

ಇನ್ನಷ್ಟು ಓದಿ
Hasiru Dala Buguri Children

ಬಗುರಿ

ಹಸಿರು ದಳದ ಬುಗುರಿ ಮಕ್ಕಳ ಕಾರ್ಯಚಟುವಟಿಕೆಗಳು ವಿವಿಧ ಚಟುವಟಿಕೆಗಳ ಮೂಲಕ ಮಕ್ಕಳ ಏಳಿಗೆಗಾಗಿ ಕೆಲಸ ಮಾಡುತ್ತವೆ. ಮಕ್ಕಳು ಶಾಲೆಗಳನ್ನು ಬಿಡದೆ, ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸುವಂತೆ ನೋಡಿಕೊಳ್ಳುವುದು ಮತ್ತು ಅವರು ಬೆಳೆಯುವುದಕ್ಕಾಗಿ ಅಗತ್ಯವಿರುವ ಪೋಷಕ ಅವಕಾಶಗಳನ್ನು ಕಂಡುಕೊಳ್ಳುವುದು ಇದರ ಉದ್ದೇಶವಾಗಿದೆ.

ಇನ್ನಷ್ಟು ಓದಿ
Hasiru Dala Health

ಆರೋಗ್ಯ

ಹಸಿರು ದಳ ತ್ಯಾಜ್ಯ ಆಯುವವರ ಆರೋಗ್ಯಕ್ಕೆ ಇರುವ ಆಪತ್ತುಗಳನ್ನು ಕನಿಷ್ಠಗೊಳಿಸುವುದಕ್ಕಾಗಿ ಮತ್ತು ಅವರ ಆರೋಗ್ಯದ ಆತಂಕಗಳನ್ನು ಕಡಿಮೆ ಮಾಡುವುದಕ್ಕಾಗಿ ಬಹುಮುಖಿ ಕಾರ್ಯತಂತ್ರವನ್ನು ಅಳವಡಿಸಿಕೊಂಡಿದೆ. ಹೆಚ್ಚಿನ ಆರೋಗ್ಯದ ಅಪಾಯಗಳನ್ನು ನಿವಾರಿಸಲು ನಾವು ಅವರ ಪೌಷ್ಟಿಕತೆಯ ಕುರಿತು ಗಮನಹರಿಸುತ್ತೇವೆ.

ಇನ್ನಷ್ಟು ಓದಿ
Hasiru Dala Zero Waste

ಶೂನ್ಯ ತ್ಯಾಜ್ಯ

ತ್ಯಾಜ್ಯವನ್ನು ವಿಲೇವಾರಿ ಮಾಡುವ ಭೂಭರ್ತಿ ತಾಣಗಳ ಮೇಲೆ ಹೊರೆ ಹೆಚ್ಚಾಗಿದೆ ಮತ್ತು ಜಲಮೂಲಗಳು ಕಟ್ಟಿಕೊಂಡಿವೆ; ಆದ್ದರಿಂದ ತ್ಯಾಜ್ಯವನ್ನು ಆಯಾ ವಾರ್ಡುಗಳಲ್ಲಿಯೇ ಸಂಸ್ಕರಿಸುವುದು ನಮ್ಮ ಗುರಿಯಾಗಿದೆ.

ಇನ್ನಷ್ಟು ಓದಿ
Covid Hasiru Dala

ಕೋವಿಡ್-19ಕ್ಕೆ ಪ್ರತಿಕ್ರಿಯೆ

ಸಮುದಾಯದೊಂದಿಗೆ ನಮ್ಮ ಸಂಪರ್ಕವು ಬಲವಾಗಿದ್ದರಿಂದ ನಮ್ಮ ಬಳಿ ಅಗತ್ಯವಾದ ದತ್ತಾಂಶಗಳಿದ್ದವು, ಆದ್ದರಿಂದ ಮಾರ್ಚ್ 18ರಿಂದಲೇ ನಾವು ನಮ್ಮ ಸಮುದಾಯದಲ್ಲಿನ ಅತ್ಯಂತ ದುರ್ಬಲ ಸದಸ್ಯರಿಗೆ, ಎಂದರೆ ಈ ಮುಂಚೆ ಸಾರ್ವಜನಿಕ ವಿತರಣೆ ವ್ಯವಸ್ಥೆಯ ಲಾಭ ಪಡೆಯದೇ ಇದ್ದವರು, ಒಂಟಿ ಪೋಷಕರು, ವೃದ್ಯಾಪ್ಯ ವೇತನ ಪಡೆಯುತ್ತಿದ್ದವರು ಮುಂತಾದವರಿಗೆ ರೇಷನ್ ವಿತರಣೆ ಮಾಡುವುದಕ್ಕೆ ತೊಡಗಿದೆವು.

ಇನ್ನಷ್ಟು ಓದಿ
EPR Hasiru Dala

ಉತ್ಪಾದಕರ ವಿಸ್ತರಿತ ಹೊಣೆಗಾರಿಕೆ

ಉತ್ಪಾದಕರ ವಿಸ್ತರಿತ ಹೊಣೆಗಾರಿಕೆ ಎಂಬ ಪದ್ಧತಿ ಮತ್ತು ಕಾರ್ಯನೀತಿಯಲ್ಲಿ ಪ್ಲ್ಯಾಸ್ಟಿಕ್ ವಸ್ತುಗಳ ತಯಾರಕರು/ಉತ್ಪಾದಕರು/ಬ್ರ್ಯಾಂಡ್ ಮಾಲೀಕರು, ಗ್ರಾಹಕರು ಅವುಗಳನ್ನು ಅವರ ವಸ್ತುಗಳನ್ನು ಕೊಂಡು, ಬಳಸಿ, ಅವರಿಗೆ ಅವು ನಿಷ್ಪ್ರಯೋಜಕವಾದಾಗ ಅವುಗಳನ್ನು ಹಿಂದಕ್ಕೆ ಪಡೆದು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವ ಹೊಣೆಯನ್ನು ಸ್ತತಃ ತಯಾರಕರು/ಉತ್ಪಾದಕರು/ಬ್ರ್ಯಾಂಡ್ ಮಾಲೀಕರೇ ಹೊರುವುದಾಗಿದೆ. ಈ ಹೊಣೆಗಾರಿಕೆಯು ಹಣಕಾಸಿನ ರೀತಿಯಲ್ಲಿರಬಹುದು, ಇಲ್ಲವೇ ಭೌತಿಕ ಅಥವಾ ಎರಡರ ಒಂದು ಸೂಕ್ತ ಸಂಯೋಗವಾಗಿರಬಹುದು.

ಇನ್ನಷ್ಟು ಓದಿ
Oceans Hasiru Dala

ಮಹಾಸಾಗರಗಳು

ಸಾಗರ ಸಮುದ್ರಗಳ ಮಾಲಿನ್ಯವನ್ನು ತಡೆಗಟ್ಟಲು, ಘನ ತ್ಯಾಜ್ಯ ನಿರ್ವಹಣೆ ಒಂದು ಪ್ರಜ್ಞಾಪೂರ್ವಕ, ಜಾಗೃತ ಕಾಳಜಿಯಾಗಬೇಕು; ಅದಕ್ಕೆಂದೇ ರೂಪಿಸಿದ ವಿಶಿಷ್ಟ ಯೋಜನೆ ಮತ್ತು ಜಾಗೃತಿಯ ಹೊರತಾಗಿ ಇದನ್ನು ಮಾಡಲು ಸಾಧ್ಯವಿಲ್ಲ.

ಇನ್ನಷ್ಟು ಓದಿ
Hasiru Dala Waste Narratives
ನಮ್ಮ ಕಥೆಗಳು

ತ್ಯಾಜ್ಯ ನಿರೂಪಣೆಗಳು

ತ್ಯಾಜ್ಯ ಮತ್ತು ತ್ಯಾಜ್ಯ ಕಾರ್ಯಕರ್ತರ ಕಥೆಗಳು, ಅನುಭವಗಳು.

ಇನ್ನಷ್ಟು ಓದಿ

ಪಾಲುದಾರರು ಮತ್ತು ಬೆಂಬಲ

Kannada