ಉಪಕ್ರಮಗಳು

Creating Livelihoods in Solid Waste Managment

2011ರಲ್ಲಿ, ಬೆಂಗಳೂರು ನಗರದಲ್ಲಿ ತ್ಯಾಜ್ಯವನ್ನು ಅಗತ್ಯವಾದ ರೀತಿಯಲ್ಲಿ ಪ್ರತ್ಯೇಕಿಸುತ್ತಿರಲಿಲ್ಲ. ಮುನಿಸಿಪಲ್ ಕಾರ್ಪೊರೇಷನ್ ಮನೆಗಳು, ರಸ್ತೆಗಳು ಮತ್ತು ಸ್ಥಳೀಯ ಕಸದ ಗುಡ್ಡೆಗಳಿಂದ ತ್ಯಾಜ್ಯವನ್ನು ಸಂಗ್ರಹಿಸುತ್ತಿತ್ತು ಮತ್ತು ಬೆಂಗಳೂರಿನ ನೆರೆಹೊರೆಯಲ್ಲಿರುವ ಗ್ರಾಮಗಳಲ್ಲಿ ಇರುವ ಡಂಪಿಂಗ್ ಸೈಟುಗಳಿಗೆ ಸಾಗಣೆ ಮಾಡುತ್ತಿತ್ತು.

2013ರ ಹೊತ್ತಿಗೆ, ಬೆಂಗಳೂರಿನಲ್ಲಿ ದಿನಕ್ಕೆ 4,000 ಟನ್ನಿನಷ್ಟು ತ್ಯಾಜ್ಯ ಉತ್ಪತ್ತಿಯಾಗುತ್ತಿತ್ತು. ಒಂದು ಅಂದಾಜಿನ ಪ್ರಕಾರ 2047ರ ವೇಳೆಗೆ, ವ್ಯವಹಾರವು ಎಂದಿನಂತೆ ಹೀಗೇ ಮುಂದುವರೆದರೆ, ಭಾರತದಲ್ಲಿ ಉತ್ಪನ್ನವಾಗುವ ಒಟ್ಟು ತ್ಯಾಜ್ಯದ ಪ್ರಮಾಣ ವರ್ಷಕ್ಕೆ 26 ಕೋಟಿ ಟನ್ನುಗಳಷ್ಟು; ಮತ್ತು ಇದರ ಮೌಲ್ಯವು 260 ಕೋಟಿ ಯುರೋ(EBTC n.d.) ಆಗುತ್ತದೆ. ಜನಸಂಖ್ಯಾ ಹೆಚ್ಚಳ, ಆರ್ಥಿಕ ಬೆಳವಣಿಗೆ ಮತ್ತು ಬದಲಾಗುವ ಗ್ರಾಹಕ ಮಾದರಿಗಳು-ಮತ್ತು ಇದರ ಉಪಪರಿಣಾಮವಾದ ನಗರೀಕರಣ ಶೀಘ್ರಗತಿಯಲ್ಲಿ ಹೆಚ್ಚಾಗುತ್ತಿದೆ ಎಂಬುದು ಅಚ್ಚರಿಯೇನಲ್ಲ. ಅದೇ ಹೊತ್ತಿನಲ್ಲಿ ನಗರದ ತ್ಯಾಜ್ಯದ ವಸ್ತುಗಳನ್ನು ಮರುಬಳಕೆ ಮತ್ತು ಪುನರುತ್ಪಾದನೆ ಮಾಡುವ ಸಾಮರ್ಥ್ಯವೂ ಬೆಳೆಯಬೇಕಾಗುತ್ತದೆ.

ಇನ್ನಷ್ಟು ಓದಿ

ಸವಾಲುಗಳು

ತ್ಯಾಜ್ಯ ಆಯುವವರನ್ನು ಘನ ತ್ಯಾಜ್ಯ ನಿರ್ವಹಣೆ ನಿರ್ವಹಣೆಯ ಚೌಕಟ್ಟಿನಲ್ಲಿ ಏಕೀಕರಿಸುವ ಪ್ರಕ್ರಿಯೆಯಲ್ಲಿ ಹಸಿರು ದಳ ಎದುರಿಸಿದ ಸವಾಲು ಮೂರು ಬಗೆಯದಾಗಿತ್ತು.

ಮೊದಲನೆಯದಾಗಿ, ರಸ್ತೆ ಬದಿಗಳಲ್ಲಿ ಒಣ ತ್ಯಾಜ್ಯವನ್ನು ಆಯ್ದುಕೊಳ್ಳುತ್ತಾ ಓಡಾಡುತ್ತಿದ್ದವರನ್ನು ತ್ಯಾಜ್ಯ ನಿರ್ವಹಣೆಯ ಸೇವಾದಾತರಾಗುವತ್ತ ಮತ್ತು ಉದ್ಯಮಶೀಲರಾಗುವತ್ತ ಮನವೊಲಿಸುವುದು. ಇದಕ್ಕೆ ತ್ಯಾಜ್ಯ ಆಯುವವರಲ್ಲಿ ಆಳವಾದ ವರ್ತನೆ ಬದಲಾವಣೆ ಆಗಬೇಕಾದ ಅಗತ್ಯವಿತ್ತು; ಬಿಬಿಎಂಪಿ ಅಧಿಕಾರಿಗಳೊಂದಿಗೆ ವ್ಯವಹರಿಸುವುದರಿಂದ ಹಿಡಿದು, ವಾಹನ ಚಾಲನೆ, ಕಾಂಪೋಸ್ಟಿಂಗ್, ದತ್ತಾಂಶಗಳನ್ನು ನಿಭಾಯಿಸುವುದು ಮತ್ತು ಸಮವಸ್ತ್ರಗಳಿಗೆ ಒಗ್ಗಿಕೊಳ್ಳುವ ವರೆಗೆ ಹಲವು ಬದಲಾವಣೆಗಳನ್ನು ಅವರು ರೂಢಿಸಿಕೊಳ್ಳಬೇಕಾಗಿತ್ತು.

ಇನ್ನಷ್ಟು ಓದಿ

ನಮ್ಮ ಕಾರ್ಯವಿಧಾನ

ನಮ್ಮ ಕಾರ್ಯವಿಧಾನದ ಮೂಲದಲ್ಲಿರುವ ಉದ್ದೇಶ ತ್ಯಾಜ್ಯ ಅಯುವವರ ಕಾಯಕಕ್ಕೆ ಘನತೆಯನ್ನು ತರುವುದಾಗಿದೆ. ಅವರ ಜೀವನೋಪಾಯಕ್ಕೆ ಗೌರವ ಸಲ್ಲಿಸುವ ಸಲುವಾಗಿ ತ್ಯಾಜ್ಯ ಕಾರ್ಮಿಕರು ಅವರ ಹಣಕಾಸು ಸ್ಥಿರತೆಯನ್ನು ಹೆಚ್ಚಿಸುವ ಮತ್ತು ಅವರ ಕೆಲಸದ ಸ್ಥಿತಿಗಳನ್ನು ಸುಧಾರಿಸುವ ಮಾರ್ಗವನ್ನು ನಾವು ಸೃಷ್ಟಿಸಿದ್ದೇವೆ.

  • ತ್ಯಾಜ್ಯ ಆಯುವವರು ಸೇವಾದಾತರಾಗಲು ಅಗತ್ಯವಾದ ತರಬೇತಿ ಮತ್ತು ಕೌಶಲ ಸಂವರ್ಧನೆ. ನೀಡಲಾದ ತರಬೇತಿಯಲ್ಲಿ, ಜೈವಿಕ ಕಸದ ನಿರ್ವಹಣೆ, ಇವೆಂಟುಗಳಿಂದ ಉಂಟಾಗುವ ತ್ಯಾಜ್ಯದ ನಿರ್ವಹಣೆ ಮತ್ತು ಸರ್ಟಿಫಿಕೇಷನ್ ಕೋರ್ಸ್ ಒಳಗೊಂಡಿದ್ದವು: ವೇಸ್ಟ್ ವೈಜ್ ಟ್ರಸ್ಟ್ ಮತ್ತು ಜೈನ್ ವಿಶ್ವವಿದ್ಯಾಲಯದ(ಡೀಮ್ಡ್ ಯುನಿವರ್ಸಿಟಿಯ) ಸಹಯೋಗದೊಂದಿಗೆ ಸಣ್ಣ ಉದ್ಯಮಿಗಳ ಕೌಶಲವನ್ನು ಹೆಚ್ಚಿಸುವುದು.
  • ತ್ಯಾಜ್ಯ ಆಯುವವರ ಕಾಯಕಕ್ಕೆ ಘನತೆಯನ್ನು ಒದಗಿಸಲು ಮತ್ತು ನಿಗದಿತ ಆದಾಯವನ್ನು ತರುವ ಸಲುವಾಗಿ, ನಗರದ ಔಪಚಾರಿಕ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಯಲ್ಲಿ ಏಕೀಕರಿಸುವ ಸಲುವಾಗಿ ಅಗತ್ಯವಾದ ಕಾರ್ಯನೀತಿ ಮತ್ತು ಶಾಸನಗಳನ್ನು ತರುವ ಸಲುವಾಗಿ ಸ್ಥಳೀಯ, ರಾಜ್ಯ ಮತ್ತು ಕೇಂದ್ರ ಸರಕಾರಗಳೊಡನೆ ಕೆಲಸ ಮಾಡುವುದು.
  • ಸರಕಾರಿ ಮತ್ತು ಖಾಸಗಿ ಸಂಸ್ಥೆಗಳು ತ್ಯಾಜ್ಯ ಆಯುವವರನ್ನು ನೇಮಕಮಾಡಿ ತ್ಯಾಜ್ಯವನ್ನು ಮನೆಮನೆಯಿಂದ ಸಂಗ್ರಹಿಸುವಲ್ಲಿ ಅವರ ಸೇವೆಯನ್ನು ಬಳಸಿಕೊಳ್ಳುವಂತಾಗಲು ಅವರನ್ನು ತರಬೇತುಗೊಳಿಸುವುದು.
  • ಬೆಂಗಳೂರಿನಲ್ಲಿ ಒಣ ತ್ಯಾಜ್ಯ ಸಂಗ್ರಹಣೆ ಕೇಂದ್ರಗಳುಆರಂಭಿಸಲಾಗಿದೆ, ನಂತರ ಮೈಸೂರು, ತುಮಕೂರು, ಹುಬ್ಬಳ್ಳಿ-ಧಾರವಾದ, ದಾವಣಗೆರೆ, ಚಾಮರಾಜನಗರ, ಮಂಗಳೂರಿನ ಉಲ್ಲಾಳ, ರಾಜಮುಂಡ್ರಿಗೆ ವಿಸ್ತರಿಸಲಾಗಿದೆ.DWCCಗಳು ಸುಸ್ಥಿರ ಮಾದರಿಯನ್ನು ಪ್ರತಿನಿಧಿಸುವ ಸಾಮಾಜಿಕ ಪರಿಗಣನೆಗಳು, ಹಣಕಾಸು ಪರಿಗಣನೆಗಳು ಮತ್ತು ಪರಿಸರದ ಪ್ರಭಾವ ಈ ಮೂರು ಮೂಲೆಗಲ್ಲುಗಳನ್ನು ಪ್ರದರ್ಶಿಸುತ್ತವೆ.

ಪ್ರಕರಣ ಅಧ್ಯಯನ

ಒಣ ತ್ಯಾಜ್ಯ ನಿರ್ವಹಣೆಗೆ ನಾಲ್ಕು ಹಂತಗಳ ಕಾರ್ಯಕ್ರಮ

ಒಣ ತ್ಯಾಜ್ಯ ಸಂಗ್ರಹಣೆ ಕೇಂದ್ರಗಳು ಸಾರ್ವಜನಿಕ-ಖಾಸಗಿ ಪಾಲುದಾರಿಕೆಗಳಾಗಿ

ಹಸಿರು ದಳ ಕರ್ನಾಟಕದ ಐದು ನಗರಗಳಲ್ಲಿ, ಈ ಮುಂಚೆ ತ್ಯಾಜ್ಯ ಆಯುವವರು ಮತ್ತು ಸ್ಕ್ರ್ಯಾಪ್ ಡೀಲರುಗಳಾಗಿದ್ದವರು ಕಾರ್ಯಚಾಲನೆ ಮಾಡುತ್ತಿರುವ 45 ಒಣ ತ್ಯಾಜ್ಯ ಸಂಗ್ರಹಣೆ ಕೇಂದ್ರಗಳಿಗೆ ಬೆಂಬಲವನ್ನು ನೀಡುತ್ತಿದೆ, ಮತ್ತು ಇದನ್ನು ಇತರ ನಗರಗಳು ಮತ್ತು ವಾರ್ಡುಗಳಿಗೆ ವಿಸ್ತರಿಸುವ ಯೋಜನೆಯನ್ನು ಹೊಂದಿದೆ. DWCCಗಳ ನಿರ್ವಹಣೆಯಲ್ಲಿ ಹಸಿರು ದಳದ ಪಾತ್ರದಲ್ಲಿ ಉದ್ಯಮಿಗಳು ಈ ಕೇಂದ್ರಗಳನ್ನು ಕಾರ್ಯಚಾಲನೆ ಮಾಡುವುದಕ್ಕೆ ಬೆಂಬಲಿಸುವುದು, ನಾಗರಿಕರನ್ನು ಜೊತೆಗೆ ತೊಡಗಿಸಿಕೊಂಡು ನಿವಾಸಿಗಳಲ್ಲಿ, ತ್ಯಾಜ್ಯವನ್ನು ಮೂಲದಲ್ಲಿಯೇ ಪ್ರತ್ಯೇಕಿಸುವುದರ ಮಹತ್ವ ಮತ್ತು ತ್ಯಾಜ್ಯ ನಿರ್ವಹಣೆಯ ಸುಸ್ಥಿರ ವಿಧಾನಗಳ ಕುರಿತು ಜಾಗೃತಿಯನ್ನು ಮೂಡಿಸುವುದು, ಮತ್ತು ಈ ವಾರ್ಡುಗಳಲ್ಲಿ ತ್ಯಾಜ್ಯದ ಸಂಗ್ರಹಣೆಯನ್ನು ಸುಗಮಗೊಳಿಸುವುದು ಸೇರಿವೆ.

ಹಸಿರು ದಳ ಒಟ್ಟುಗೂಡಿಸುವಿಕೆ ಕೇಂದ್ರ

ಕೋವಿಡ್-19 ಆಗಿರಬಹುದು, ಡಿಮಾನಿಟೈಜೇಷನ್ ಆಗಿರಬಹುದು ಅಥವಾ ತೆರಿಗೆ ವಿಧಾನದಲ್ಲಾದ ಬದಲಾವಣೆ ಇರಬಹುದು -ವ್ಯವಸ್ಥೆಯಲ್ಲಿ ನಿರಂತರ ಒಂದಿಲ್ಲೊಂದು ಬದಲಾವಣೆಗಳು ಬರುತ್ತಲೇ ಇವೆ. ಇವು ಪುನರುತ್ಪಾದನೆ ಉದ್ಯಮದ ಮಾರುಕಟ್ಟೆಯ ಬೆಲೆಗಳಲ್ಲಿ ಏರುಪೇರನ್ನು ತಂದಿವೆ, ಈ ಅನಿಶ್ಚಿತತೆಯು ಅನೌಪಚಾರಿಕ ತ್ಯಾಜ್ಯ ಸಂಗ್ರಹಣೆಮಾಡುವವರ ಬದುಕುಗಳ ಮೇಲೆ ನೇರವಾಗಿ ಪ್ರಭಾವವನ್ನು ಬೀರಿದೆ.

DWCCಗಳನ್ನು ನಿರ್ವಹಿಸುತ್ತಿರುವವರು ವಸ್ತುಗಳನ್ನು ತಮ್ಮ ಮನೆಗಳಲ್ಲಿ ಮತ್ತು ಚಿಕ್ಕ ಅಂಗಡಿಗಳಲ್ಲಿ ಸಂಗ್ರಹಿಸಿ ಇಟ್ಟಿರುತ್ತಾರೆ, ತ್ಯಾಜ್ಯವನ್ನು ದಾಸ್ತಾನು ಮಾಡಲು ಮತ್ತು ವಿಂಗಡಿಸಲು ಅವರಿಗೆ ಹೆಚ್ಚಿನ ಸ್ಥಳಾವಕಾಶ ಬೇಕು. ಈ ಸವಾಲುಗಳನ್ನು ಎದುರಿಸಲು ಹಸಿರು ದಳ ಬೆಂಗಳೂರಿನಲ್ಲಿ ಮೂರು ಒಟ್ಟುಗೂಡಿಸುವಿಕೆಯ ಕೇಂದ್ರಗಳನ್ನು ಸ್ಥಾಪಿಸುತ್ತಿದೆ. ಇವು ದಿನಕ್ಕೆ 4-6 ಟನ್ನುಗಳಷ್ಟು ಒಣ ಕಸವನ್ನು ವಿಂಗಡಿಸಿ ಉಪಯುಕ್ತವಾದುದನ್ನು ಪುನಃಪಡೆಯುವ ಸಾಮರ್ಥ್ಯವನ್ನು ಹೊಂದಿವೆ. ಒಟ್ಟುಗೂಡಿಸುವಿಕೆ ಕೇಂದ್ರಗಳು ಕೋವಿಡ್ -19 ನಂತರದ ದಿನಗಳಲ್ಲಿ ಪುನರುತ್ಪಾದನೆ ಉದ್ದಿಮೆಯು ಕೂಡಲೇ ಕಾರ್ಯಪ್ರವೃತ್ತವಾಗಿ ಚೇತರಿಸಿಕೊಳ್ಳುವುದಕ್ಕೆ ಸಹಾಯಕವಾಗುತ್ತವೆ. ಸ್ಲಮ್ಮುಗಳಿಂದ ಕ್ಲಸ್ಟರ್ ಕಲೆಕ್ಷನ್ ಯೋಜನೆ ಒಟ್ಟುಗೂಡಿಸುವಿಕೆ ಕೇಂದ್ರಗಳು ಕೈಗೊಳ್ಳಲು ನೋಡುತ್ತಿರುವ ಮೊದಲ ಪ್ರಯತ್ನವಾಗಿದೆ, ಇದು ತ್ಯಾಜ್ಯ ಆಯುವವರಿಗೆ ಸರಿಯಾದ ಬೆಲೆಯನ್ನು ಒದಗಿಸುತ್ತದೆ.

ಪ್ಲ್ಯಾಸ್ಟಿಕ್ ಪುನರುತ್ಪಾದನೆ ಕಾರ್ಯಕ್ರಮ ಯು ಎನ್ ಡಿ ಪಿ ಸ್ವಚ್ಛತಾ ಕೇಂದ್ರ

ಹಿಂದುಸ್ತಾನ್ ಕೋಕ ಕೋಲ ಬೆವೆರೇಜಸ್ ಪ್ರೈ.ಲಿ. (HCCBPL)ಸಹಯೋಗದೊಂದಿಗೆ ಯು ಎನ್ ಡಿ ಪಿ ಇಂಡಿಯಾ ಭಾರತದ 50 ನಗರಗಳಲ್ಲಿ ಪ್ಲ್ಯಾಸ್ಟಿಕ್ ತ್ಯಾಜ್ಯ ಪುನರುತ್ಪಾದನೆ ನಿರ್ವಹಣೆಯ ಕುರಿತು ’ಪೃಥ್ವಿ’ ಎಂಬ ಕಾರ್ಯಯೋಜನೆಯನ್ನು ಆರಂಭ ಮಾಡಿದೆ. ಹಸಿರು ದಳ ಬೆಂಗಳೂರಿನಲ್ಲಿ ಈ ಕಾರ್ಯಯೋಜನೆಯನ್ನು ಅನುಷ್ಠಾನಗೊಳಿಸುವ ಪಾಲುದಾರ ಸಂಸ್ಥೆಯಾಗಿದೆ. ಸಂಯೋಜಿತ ಪ್ಲ್ಯಾಸ್ಟಿಕ್ ನಿರ್ವಹಣೆ ಮತ್ತು ಸಮರ್ಥ ಪುನರುತ್ಪಾದನೆಗಾಗಿ ಹೆಚ್ಚು ಸುಸ್ಥಿರವಾದ ಸಮುದಾಯ ಸಂಚಾಲಿತ ವಿಧಾನವನ್ನು ಸ್ಥಾಪಿಸುವುದು ಇದರ ಉದ್ದೇಶವಾಗಿದೆ.

ಒಟ್ಟುಗೂಡಿಸುವಿಕೆ ಕೇಂದ್ರಗಳಿಗಿಂತ ಭಿನ್ನವಾಗಿ, ಸ್ವಚ್ಛತಾ ಕೇಂದ್ರವೂ ಪ್ಲ್ಯಾಸ್ಟಿಕ್ ಅಪ್-ಸೈಕಲ್ ಮಾಡುತ್ತದೆ. ಈ ಕೇಂದ್ರದಲ್ಲಿ ಕಡಿಮೆ-ಸಾಂದ್ರತೆಯ ಪಾಲಿಎಥಿಲೀನ್ ಯಂತ್ರವಿದೆ, ಇದು ಬಳಸಲುಬಾರದ ಪ್ಲ್ಯಾಸ್ಟಿಕನ್ನು ಪ್ಲ್ಯಾಸ್ಟಿಕ್ ವಸ್ತುಗಳನ್ನು ತಯಾರಿಸಲು ಅಗತ್ಯವಾದ ಕಚ್ಚಾವಸ್ತುವನ್ನಾಗಿ ಪರಿವರ್ತಿಸುತ್ತದೆ.

ಈ ಕಾರ್ಯಯೋಜನೆಯಲ್ಲಿ, ಕೇಂದ್ರದಲ್ಲಿ ದೈನಂದಿನ ಒಳಬರುವ ಮತ್ತು ಹೊರಹೋಗುವ ಸಾಮಗ್ರಿಯ ನಿಗಾವಣೆಗಾಗಿ ತಂತ್ರಜ್ಞಾನ ಅಪ್ಲಿಕೇಷನ್ನುಗಳನ್ನು ಅಳವಡಿಸಲಾಗಿದೆ, ಇದರಿಂದ ಜಾರಿಯಲ್ಲಿರುವ ಸರಬರಾಜು ಸರಣಿಯಲ್ಲಿ ಸಾಮಗ್ರಿಯ ಜಾಡನ್ನು ಹಿಡಿಯಲು ಸುಲಭವಾಗುತ್ತದೆ.

ಒಟ್ಟುಗೂಡಿಸುವಿಕೆ ಕೇಂದ್ರ ಮತ್ತು ಯು ಎನ್ ಡಿ ಪಿಯ ಕಾರ್ಯಕ್ರಮದ ಅಡಿಯಲ್ಲಿನ ಪ್ಲ್ಯಾಸ್ಟಿಕ್ ಸಂಸ್ಕರಣ ಘಟದ ಜೊತೆಗೆ ಹಸಿರು ದಳ ಈಗ ತ್ಯಾಜ್ಯ ಆಯುವವರನ್ನು ಹೆಚ್ಚು ದೊಡ್ಡ ಸಾಮಗ್ರಿ ಪುನಃಸಂಪಾದಿಸುವ ಸೌಕರ್ಯಗಳಲ್ಲಿ ಏಕೀಕರಿಸಲು ನೋಡುತ್ತಿದೆ. ತ್ಯಾಜ್ಯ ಆಯುವವರು ಮತ್ತು ಸ್ಕ್ರ್ಯಾಪ್ ಡೀಲರುಗಳು ಈ ವರೆಗೆ DWCCಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಸಂಸ್ಕರಣೆ ಮತ್ತು ಒಟ್ಟುಗೂಡಿಸುವಿಕೆ ಘಟಕಗಳಲ್ಲಿಯೂ ಕಾಲಿರಿಸುವ ಮೂಲಕ ಹೆಚ್ಚು ದೊಡ್ಡ ಘಟಕಗಳಲ್ಲಿ ಕೆಲಸ ಮಾಡಬಲ್ಲೆವು ಎಂದು ಸಾಧಿಸಿದಂತಾಗುತ್ತದೆ ಮತ್ತು ವ್ಯವಹಾರದ ಹೊಸ ಮಾದರಿಗಳನ್ನೂ ಹುಡುಕಿಕೊಂಡಾಗುತ್ತದೆ.

ವಸ್ತು ಹಿಂಪಡೆಯುವಿಕೆ ಸೌಲಭ್ಯ(MRF)

ದಾವಣಗೆರೆ, ರಾಜಮುಂಡ್ರಿ, ಮತ್ತು ಹುಬ್ಬಳ್ಳಿ-ಧಾರವಾಡಗಳಲ್ಲಿ ವಸ್ತು ಹಿಂಪಡೆಯುವ ಸೌಲಭ್ಯ, MRFಗಳನ್ನು ಸ್ಥಾಪಿಸಲಾಗಿದೆ. ಈ ನಗರಗಳಲ್ಲಿ ವಾರ್ಡ್ ಮಟ್ಟದಲ್ಲಿ DWCCನ್ನು ಸ್ಥಾಪಿಸುವ ಯೋಜನೆಯಿದೆ, ಇಲ್ಲಿ ತ್ಯಾಜ್ಯವನ್ನು ವಿಂಗಡಿಸಿ ಶ್ರೇಣೀಕರಿಸಲಾಗುವುದು. ಸಾಮಗ್ರಿಯನ್ನು ಸಂಸ್ಕರಣೆಗಾಗಿ MRFಗೆ ಕಳಿಸಲಾಗುವುದು. ಇದು ಒಣ ತ್ಯಾಜ್ಯವನ್ನು ನಿರ್ವಹಿಸಲು ಹಬ್ ಅಂಡ್ ಸ್ಪೋಕ್ ತರದ ಮಾದರಿಯಾಗಿದೆ. ಇದನ್ನು ಪಿಪಿಪಿ ಮಾದರಿಯನ್ನು ಆಧರಿಸಿ ಮಾಡಲಾಗಿದೆ; ಇಲ್ಲಿ ಭೂಮಿ ಮತ್ತು ಕಟ್ಟಡದ ಮೂಲಸೌಕರ್ಯವನ್ನು ನಗರವು ಕೊಡುತ್ತದೆ, ಯಂತ್ರೋಪಕರಣಗಳು ಮತ್ತು ತಾಂತ್ರಿಕ ಬೆಂಬಲವನ್ನು ಹಸಿರು ದಳ ಕೊಡುತ್ತದೆ ಮತ್ತು ಪರಿಣಾಮತಃ ತರಬೇತಿ ಹೊಂದಿದ ತ್ಯಾಜ್ಯ ಆಯುವವರು ಇದನ್ನು ನಡೆಸಿಕೊಂಡು ಹೋಗುತ್ತಾರೆ.

Kannada