ಉತ್ಪಾದಕರ ವಿಸ್ತರಿತ ಹೊಣೆಗಾರಿಕೆ ಎಂಬ ಪದ್ಧತಿ ಮತ್ತು ಕಾರ್ಯನೀತಿಯಲ್ಲಿ ಪ್ಲ್ಯಾಸ್ಟಿಕ್ ವಸ್ತುಗಳ ತಯಾರಕರು/ಉತ್ಪಾದಕರು/ಬ್ರ್ಯಾಂಡ್ ಮಾಲೀಕರು, ಗ್ರಾಹಕರು ಅವುಗಳನ್ನು ಅವರ ವಸ್ತುಗಳನ್ನು ಕೊಂಡು, ಬಳಸಿ, ಅವರಿಗೆ ಅವು ನಿಷ್ಪ್ರಯೋಜಕವಾದಾಗ ಅವುಗಳನ್ನು ಹಿಂದಕ್ಕೆ ಪಡೆದು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವ ಹೊಣೆಯನ್ನು ಸ್ತತಃ ತಯಾರಕರು/ಉತ್ಪಾದಕರು/ಬ್ರ್ಯಾಂಡ್ ಮಾಲೀಕರೇ ಹೊರುವುದಾಗಿದೆ. ಈ ಹೊಣೆಗಾರಿಕೆಯು ಹಣಕಾಸಿನ ರೀತಿಯಲ್ಲಿರಬಹುದು, ಇಲ್ಲವೇ ಭೌತಿಕ ಅಥವಾ ಎರಡರ ಒಂದು ಸೂಕ್ತ ಸಂಯೋಗವಾಗಿರಬಹುದು.
ಮೈಕ್ರೋ, ಚಿಕ್ಕ ಮತ್ತು ಮಧ್ಯಮ ಉದ್ಯಮಗಳಿಗಾಗಿ, ಈ ಹೊತ್ತಿನಲ್ಲಿ ಪ್ಯಾಕೇಜಿಂಗಿಗಾಗಿ ಪುನರುತ್ಪಾದನೆ ಮಾಡಲಾಗದ ಪ್ಲ್ಯಾಸ್ಟಿಕ್ಕುಗಳನ್ನು ಬಳಸುತ್ತಿಲ್ಲ, ಅವರು ನಿರ್ಮಾಪಕ ವಿಸ್ತರಿತ ನಿಯಮಗಳನ್ನು ಉಪೇಕ್ಷಿಸುತ್ತಿದ್ದಾರೆ.
ಇತ್ತೀಚೆಗೆ ಬಳಕೆಯಾಗುತ್ತಿರುವ ಪ್ಯಾಕೇಜಿಂಗ್ (ಬಹುಪದರಪ್ಲ್ಯಾಸ್ಟಿಕ್ಅಥವಾಲ್ಯಾಮಿನೇಟುಗಳು) ಸಂಯೋಜಿತವಾಗಿರುತ್ತದೆ, ತ್ಯಾಜ್ಯ ನಿರ್ವಹಣೆಯ ವ್ಯವಸ್ಥೆಯಲ್ಲಿ ಇವುಗಳ ವಿಲೇವಾರಿ ಇನ್ನೂ ದೊಡ್ಡ ಸವಾಲಾಗುತ್ತದೆ. ಪ್ಲ್ಯಾಸ್ಟಿಕ್ಕಿನ ನಿರ್ವಹಣೆ ಮತ್ತುನಿಯಮಗಳು 2016ರಪ್ರಕಾರ, ಪ್ಲ್ಯಾಸ್ಟಿಕ್ ಪ್ಯಾಕೇಜಿಂಗನ್ನು ಸಿಮೆಂಟ್ ಪ್ಯಾಕ್ಟರಿಗಳಲ್ಲಿ ಸುಡುವುದನ್ನು ಪುನರುತ್ಪಾದನೆ ಎಂಬಂತೆ ಪರಿಗಣಿಸಲಾಗುತ್ತದೆ ಮತ್ತು ಇದನ್ನು “ಸಹಸಂಸ್ಕರಣೆ” ಎಂದುಕರೆಯಲಾಗುತ್ತದೆ.
ಸಹಸಂಸ್ಕರಣೆಗಾಗಿ ಕಚ್ಚಾವಸ್ತುಗಳು ಒಣಇರಬೇಕಾಗುತ್ತದೆ ಅಥವಾ ಕಡಿಮೆ ತೇವಾಂಶದಿಂದ ಕೂಡಿದ್ದು ಆಗಿರಬೇಕಾಗುತ್ತದೆ. ಇಂಥ ಕಚ್ಚಾವಸ್ತು ತ್ಯಾಜ್ಯವನ್ನು ಮೂಲದಲ್ಲಿಯೇ ಪ್ರತ್ಯೇಕಿಸುವುದರಿಂದ ಮಾತ್ರ ಲಭ್ಯವಾಗುತ್ತದೆ. ಆದರೆ, ಹಲವು ಬಾರಿ ಇಂಥ ಸಾಮಗ್ರಿಯನ್ನು ಡಂಪ್ ಸೈಟುಗಳು, ಚರಂಡಿಗಳಲ್ಲಿ, ಮತ್ತು ನೀರಿನ ಆಕರಗಳಲ್ಲಿ ಬಿಸಾಡಲಾಗುತ್ತದೆ. ಇಂಥ ಸಾಮಗ್ರಿಯನ್ನು ನಗರಗಳಿಂದ ತುಂಬಾ ದೂರದಲ್ಲಿರುವ ಸಿಮೆಂಟ್ ಫ್ಯಾಕ್ಟರಿಗಳಿಗೆ ಸಾಗಿಸುವುದು ಬಲು ವೆಚ್ಚದ ಕಾರ್ಯವಾಗುತ್ತದೆ, ಇದು ಹಗುರವಾದ ವಸ್ತುವಾಗಿರುವುದರಿಂದ ಸಂಗ್ರಹವೂ ಕಷ್ಟಕರವಾಗುತ್ತದೆ.
ಇಂಥ ವಸ್ತುಗಳ ಬಳಕೆಯನ್ನು ನಿರುತ್ತೇಜಿಸುವುದಕ್ಕಾಗಿ ಮತ್ತು ಗ್ರಾಹಕರು ಬಳಸಿದ ನಂತರ ಉಳಿಯುವ ಪ್ಯಾಕೇಜ್ ತ್ಯಾಜ್ಯದ ಕುರಿತ ತಯಾರಕರ ಹೊಣೆಗಾರಿಕೆಯನ್ನು ಸ್ಥಾಪಿಸುವ ಸಲುವಾಗಿ, ಕೇಂದ್ರ ಸರಕಾರವು ಮೊದಲ ಇಪಿಆರ್ ಮಾರ್ಗಸೂಚಿಗಳನ್ನು 2011ರಲ್ಲಿ ಪರಿಚಯಿಸಿತು ಮತ್ತು ಕಂಪನಿಗಳಿಗೆ ಸಂಗ್ರಹಣೆ ಕೇಂದ್ರಗಳನ್ನು ಸ್ಥಾಪಿಸುವಂತೆ ಕೇಳಿತು. ಆದರೆ ಸದರಿ ಕಂಪನಿಗಳು ಈ ಮಾರ್ಗಸೂಚಿಯನ್ನು ಪಾಲಿಸುವಂತೆ ನೋಡಿಕೊಳ್ಳುವಂಥ ನಿರ್ದಿಷ್ಟ ವ್ಯವಸ್ಥೆ ಇಲ್ಲವಾಗಿದೆ.
ಘನ ತ್ಯಾಜ್ಯ ನಿರ್ವಹಣಾ ನಿಯಮಗಳು 2016ರಲ್ಲಿ ಇಪಿಆರ್ ಉಲ್ಲೇಖವಿದೆ ಮತ್ತು ಪ್ಲ್ಯಾಸ್ಟಿಕ್ ನಿರ್ವಹಣೆ ಮತ್ತು ಹ್ಯಾಡ್ಲಿಂಗ್ ನಿಯಮಗಳು 2016ರಲ್ಲಿ ಹೆಚ್ಚು ಪ್ರಬಲವಾದ ನಿರ್ಬಂಧಗಳನ್ನು ಹೇರಲಾಗಿದೆ, ಈ ನಿಯಮಗಳ ಪ್ರಕಟನೆಯಾದ ಆರು ತಿಂಗಳ ಒಳಗಾಗಿ ತಯಾರಕರು/ಉತ್ಪಾದಕರು ತಮ್ಮ ವಸ್ತುಗಳ ತ್ಯಾಜ್ಯದ ನಿರ್ವಹಣೆಗಾಗಿ ಸೂಕ್ತ ಯೋಜನೆಯನ್ನು ರೂಪಿಸಬೇಕು ಎಂದುದನ್ನು ಕಡ್ಡಾಯ ಮಾಡಲಾಗಿದೆ.
ವೇಗವಾಗಿ ಬದಲಾಗುವ ಫ್ಯಾಷನ್, ಆಹಾರ ವಸ್ತುಗಳ ಪ್ಯಾಕೇಜಿಂಗ್, ಅಗ್ರಿಫಾರ್ಮಾ ಇತ್ಯಾದಿ ಗಾಹಕರ ಬಳಕೆಯ ಮಾದರಿಗಳು ಹೆಚ್ಚಾಗಿರುವ ಪರಿಣಾಮದಿಂದಾಗಿ ಬಗೆಬಗೆಯ, ಗಾಳಿತೂರದ ರೀತಿಯ ಪ್ಯಾಕೇಜಿಂಗುಗಳ ಅಗತ್ಯ ಹೆಚ್ಚಾಗಿದೆ.
ಶಾಸನ, ನಿಯಮಾವಳಿಯಲ್ಲಿ ಎಲ್ಲ ಪ್ಲ್ಯಾಸ್ಟಿಕ್ ನಿರ್ಮಾಪಕರು ಮತ್ತು ಬ್ರ್ಯಾಂಡ್ ಮಾಲೀಕರು ತಮ್ಮ ತಮ್ಮ ವಸ್ತುಗಳ ತ್ಯಾಜ್ಯವನ್ನು ಸಂಗ್ರಹಿಸುವ ವ್ಯವಸ್ಥೆಯನ್ನು ಮಾಡಬೇಕು ಎಂದು ಹೇಳಿರುವುದಾದರೂ ಅದನ್ನು ವಾಸ್ತವವಾಗಿ ಹೇಗೆ ಮಾಡಬೇಕು ಎಂಬುದನ್ನು ಸ್ಪಷ್ಟವಾಗಿ ಹೇಳಿಲ್ಲ. ಪ್ಲ್ಯಾಸ್ಟಿಕ್ ಪ್ಯಾಕೇಜಿಂಗನ್ನು ಬಳಸುವ ಎಲ್ಲ ಕಂಪನಿಗಳು “ಉತ್ಪಾದಕರು” ಅಥವಾ “ಬ್ರ್ಯಾಂಡ್ ಮಾಲೀಕರು” ಎಂದು ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಪ್ಲ್ಯಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಗಳು, 2016 ಹೇಳುತ್ತವೆ. ಕಂಪನಿಗಳು ಎರಡಕ್ಕಿಂತ ಹೆಚ್ಚಿನ ರಾಜ್ಯಗಳಲ್ಲಿ ಕಾರ್ಯಚಾಲನೆ ಮಾಡುತ್ತಿದರೆ ಅವು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ.
ಪ್ಯಾಸ್ಟಿಕ್ಕಿನ ಜಾಡನ್ನು ಕಂಡುಕೊಳ್ಳಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಒಂದು ಪ್ರಕ್ರಿಯೆಯನ್ನು ರೂಪಿಸುತ್ತಿರುವ ಹೊತ್ತಿನಲ್ಲಿಯೇ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸಹಸಂಸ್ಕರಣೆಯ ತಾಂತ್ರಿಕ ಅಂಶಗಳ ಕುರಿತು ವಿವರಗಳನ್ನು ನಿರೂಪಿಸುತ್ತಿದೆ.
ಇದೆಲ್ಲದರ ನಡುವೆ ಅನೌಪಚಾರಿಕ ವಲಯವು ಎದುರಿಸುತ್ತಿರುವ ಸವಾಲುಗಳೆಂದರೆ:
ವಿಶಿಷ್ಟವಾಗಿ ಬೆಂಗಳೂರು ನಗರಕ್ಕೆ ಇರುವ ಸವಾಲು ಎಂದರೆ ಸಿಮೆಂಟ್ ಫ್ಯಾಕ್ಟರಿಗಳು ಇರುವುದು ಕನಿಷ್ಠ 12 ಗಂಟೆ ಪ್ರಯಾಣದ ಅಗತ್ಯವಿರುವ ಉತ್ತರ ಕರ್ನಾಟಕದಲ್ಲಿ.
Hasiru Dala is trying to ensure that the Extended Producer Responsibility policy is pro-worker and does not exclude the millions of people dependent on collection, segregation and disposal of waste in India. The EPR policy, in India, places a responsibility on the State Governments to monitor the manufacturers, producers and recyclers
ವಸ್ತುಗಳನ್ನು ಪತ್ತೆ ಹಚ್ಚುವಿಕೆಯ ಕುರಿತು ಅನೌಪಚಾರಿಕ ಬಾಧ್ಯಸ್ಥರಲ್ಲಿ ಅರಿವು ಮತ್ತು ದತ್ತಾಂಶ ಸಂಗ್ರಹಣೆ, ವಸ್ತುಗಳನ್ನು ಪತ್ತೆಹಚ್ಚುವಿಕೆ ಕುರಿತು ಚಿಕ್ಕ ಅನೌಪಚಾರಿಕ ತ್ಯಾಜ್ಯ ವ್ಯಾಪಾರಿಗಳಿಗೆ ತರಬೇತಿ, ಔಪಚಾರಿಕ ಉದ್ಯಮಿಗಳಾಗಲು ತ್ಯಾಜ್ಯ ಆಯುವವರನ್ನು ಉತ್ತೇಜಿಸುವುದು.
ಮರುಬಳಕೆ ಮತ್ತು ಪುನರುತ್ಪಾದನೆಗೆ ಯೋಗ್ಯವಾದ ಪ್ಲ್ಯಾಸ್ಟಿಕ್ ವಸ್ತುಗಳನ್ನು ಬಳಸುವುದನ್ನು ಒತ್ತಾಯಿಸುವಂತೆ ನಾವು ಕಾರ್ಯನೀತಿ ನಿರೂಪಕರ ಜೊತೆ ಕೆಲಸ ಮಾಡುತ್ತಿದ್ದೇವೆ. ಜೊತೆಗೆ, ಪುನರುತ್ಪಾದನೆ ಮಾಡಲು ಸಾಧ್ಯವಿಲ್ಲದ ತ್ಯಾಜ್ಯವನ್ನು ಸಂಗ್ರಹಿಸುವುದನ್ನು ಉತ್ತೇಜಿಸಿ ಅದರ ವಿಲೇವಾರಿಯಲ್ಲಿ ತಕ್ಕ ಪಾತ್ರವನ್ನು ವಹಿಸುವಂತೆ ಸಂಸ್ಥೆಯು ಒತ್ತಾಯಿಸುತ್ತಿದೆ.
2014ರಲ್ಲಿ ನಾವು ಜುವಾರಿ ಸಿಮೆಂಟ್ ಸ್ಥಾವರ ಮತ್ತು ಬಿಬಿಎಂಪಿಯಿಂದ ತ್ಯಾಜ್ಯವನ್ನು ಸಂಪನ್ಮೂಲವನ್ನಾಗಿ ಬಳಸುವ ಕುರಿತು ಒಂದು ಪ್ರಾಯೋಗಿಕ ಅಧ್ಯಯನವನ್ನು ಮಾಡಿದೆವು. ಇದು ಬೆಂಗಳೂರಿನಲ್ಲಿ ಪ್ರತ್ಯೇಕಿತ ದಹನಯೋಗ್ಯವಾದ ಭಿನ್ನಾಂಶವನ್ನು(ಎಸ್ ಸಿ ಎಫ್)[1] (ಸುಡುವುದಕ್ಕೆ ಯೋಗ್ಯವಾಗಿರುವಂತೆ ಪ್ರತ್ಯೇಕಿಸಲಾಗಿರುವ ತ್ಯಾಜ್ಯ) ಸಂಗ್ರಹಿಸಿ ಅದನ್ನು ಸಿಮೆಂಟ್ ಫ್ಯಾಕ್ಟರಿಗೆ ಕಳಿಸುವಲ್ಲಿ ಮೊದಲ ಪ್ರಯೋಗವಾಗಿತ್ತು. [1] and sending it to a cement plant in Bengaluru, that was experimented in 2014.
[1] ಈಭಿನ್ನಾಂಶಗಳನ್ನು ಸಂಸ್ಕರಿಸಬಹುದು ಮತ್ತು ತಿರಸ್ಕೃತ ಉತ್ಪನ್ನಗಳಿಂದ ಪಡೆದ ಇಂಧನದ ರೂಪದಲ್ಲಿ ಪರಿವರ್ತಿಸಬಹುದು, ಇದರಲ್ಲಿ ಗಣನೀಯವಾದ ಕ್ಯಾಲೊರಿಫಿಕ್ ಮೌಲ್ಯವಿರುತ್ತದೆ ಮತ್ತು ಇದನ್ನು, ತ್ಯಾಜ್ಯದಿಂದ ಸಂಪತ್ತು ಎನ್ನುವ ತತ್ತ್ವದ ಅನುಸಾರ ಹಲವು ಕೈಗಾರಿಕೆಗಳಲ್ಲಿ ಪರ್ಯಾಯ ಇಂಧನವನ್ನಾಗಿ ಬಳಸಬಹುದು.