ಕೋವಿಡ್-19 ಸಾಂಕ್ರಾಮಿಕದಿಂದಾಗಿ ಇಡೀ ಜಗತ್ತಿನ ಸರಕಾರಗಳು ತಮ್ಮ ನಾಗರಿಕರನ್ನು ಅವರವರ ಮನೆಗಳಲ್ಲಿಯೇ ಬಂಧಿಸಿಡುವಂತೆ ಮಾಡುವುದು ಅನಿವಾರ್ಯವಾಗಿದೆ. ಭಾರತದಲ್ಲಿ, ಮಾರ್ಚ್ 21ರ ಸಂಜೆ ಲಾಕ್ ಡೌನ್ ಘೋಷಿಸಲಾಯಿತು, ಇದರಿಂದಾಗಿ ದೇಶದ ಹಲವು ಭಾಗಗಳಲ್ಲಿ ಮಾನವೀಯ ಬಿಕ್ಕಟ್ಟು ಏರ್ಪಟ್ಟಿತು. ಆಗಿನಿಂದ ಲಕ್ಷಗಟ್ಟಲೆ ಕಾರ್ಮಿಕರು ಮತ್ತು ವಿದ್ಯಾರ್ಥಿಗಳು ಅವರಿದ್ದ ಸ್ಥಳಗಳಲ್ಲಿಯೇ ಇದ್ದುಬಿಡುವುದು ಅನಿವಾರ್ಯವಾಗಿದೆ, ಪ್ರಯಾಣದ ಮೇಲೆ ಹೇರಲಾಗಿರುವ ಕಠಿಣ ನಿರ್ಬಂಧದಿಂದ ತಮ್ಮ ತಮ್ಮ ಊರುಗಳಿಗೆ ಹೋಗಲು ಸಾಧ್ಯವಾಗಲಿಲ್ಲ.
ಭಾರತದ ಇತರ ಭಾಗಗಳಿಗಿಂತ ಭಿನ್ನವಾಗಿ ಕರ್ನಾಟಕವು, ಕೇಂದ್ರ ಸರಕಾರವು ರಾಷ್ಟ್ರಾದ್ಯಂತ್ಯದ ಲಾಕ್ ಡೌನ್ ಘೋಷಣೆ ಮಾಡುವ ಮುಂಚೆಯೇ ದಿಗ್ಭ್ರಮೆಗೊಳಿಸುವಂಥ ಲಾಕ್ ಡೌನಿಗೆ ಗುರಿಯಾಯಿತು. ಬೆಂಗಳೂರು ಕೋವಿಡ್-19ರ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಮಾರ್ಚ್ ಆರಂಭದಲ್ಲಿಯೇ ಲಾಕ್ ಡೌನಿಗೆ ಗುರಿಯಾಯಿತು. ಮಾರ್ಚ್ 13ರ ಹೊತ್ತಿಗೆ ಶೈಕ್ಷಣಿಕ ಸಂಸ್ಥೆಗಳನ್ನು ಮುಚ್ಚಲಾಯಿತು, ಇತರ ಸಾರ್ವಜನಿಕ ಸ್ಥಳಗಳ ಪ್ರವೇಶವನ್ನು ರದ್ದು ಮಾಡಲಾಯಿತು. ಲಾಡ್ ಡೌನ್ ಸಮಾಜದ ಪ್ರತಿಯೊಂದು ವಿಭಾಗದ ಮೇಲೆಯೂ ಪ್ರಭಾವವನ್ನು ಬೀರಿತು. ಈ ಎಲ್ಲ ಕ್ರಮಗಳು ದುರ್ಬಲವರ್ಗದವರು ಮತ್ತು ದಿನಗೂಲಿಯ ಮೇಲೆ ದುಡಿಯುವವರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿದೆ.
ಯಾವುದೇ ನಗರದಲ್ಲಿ ಜನಸಂಖ್ಯೆಯ 1%ರಷ್ಟು ಜನ ಅನೌಪಚಾರಿಕ ತ್ಯಾಜ್ಯ ಪುನರುತ್ಪಾದನೆಯಲ್ಲಿ ತೊಡಗಿದ್ದಾರೆ. ಇದರಲ್ಲಿ ತ್ಯಾಜ್ಯ ಕಾರ್ಮಿಕರು ರಸ್ತೆಬದಿಗಳಿಂದ ಪುನರುತ್ಪಾದನೆಗೆ ಅರ್ಹವಾದ ವಸ್ತುಗಳನ್ನು ಆಯ್ದುಕೊಳ್ಳುವುದರಿಂದ ಹಿಡಿದು, ತ್ಯಾಜ್ಯದ ಸಂಚಾರಿ ಖರೀದಿದಾರರು, ಚಿಕ್ಕ, ಮಧ್ಯಮ ಮತ್ತು ದೊಡ್ಡ ಗಾತ್ರದ ಒಟ್ಟುಗೂಡಿಸುವಿಕೆಯಲ್ಲಿ ವಿಂಗಡಣೆಕಾರರಾಗಿ ಕೆಲಸ ಮಾಡುವವರು ಮತ್ತು ಕೊನೆಯದಾಗಿ ಪುನರುತ್ಪಾದನೆ ಉದ್ಯಮಗಳಲ್ಲಿ ಕೆಲಸ ಮಾಡುವವರು ಸೇರಿದ್ದಾರೆ.
ಪುನರುತ್ಪಾದನೆಗೆ ಅರ್ಹವಾದ ವಸ್ತುಗಳನ್ನು ಪುನರುತ್ಪಾದನೆ ಉದ್ಯಮಕ್ಕೆ ತಲುಪಿಸದೇ, ಡಂಪಿಂಗ್ ತಾಣಗಳು ಅಥವಾ ಭೂಭರ್ತಿ ತಾಣಗಳಿಗೆ ತಲುಪಿಸಿದ್ದರಿಂದ ನಗರಗಳಲ್ಲಿ ತ್ಯಾಜ್ಯದ ಬೆಟ್ಟಗಳು ಬೆಳೆದವು, ತ್ಯಾಜ್ಯವನ್ನು ಪ್ರತ್ಯೇಕಿಸುವ ಅಭ್ಯಾಸವೂ ಕಡಿಮೆಯಾಯಿತು.
ಇಡೀ ಅನೌಪಚಾರಿಕ ಪುನರುತ್ಪಾದನೆ ಉದ್ಯಮವು ಕುಸಿಯಿತು, ಹೆಚ್ಚಿನನವರು ದುಡಿಮೆಯೂ ಇಲ್ಲದೆ, ಉಳಿತಾಯವೂ ಇಲ್ಲದೇ ಹಸಿವೆಯಿಂದ ಕಂಗೆಡಬೇಕಾಯಿತು. ವಿಶಿಷ್ಟವಾದ ಪುನರುತ್ಪಾದನೆಯ ವಸ್ತುವಾದ ಕೂದಲನ್ನು ಸಂಗ್ರಹಿಸುವವರು ಮೊಟ್ಟಮೊದಲು ಈ ಬಿಕ್ಕಟ್ಟಿನಿಂದ ಜರ್ಜರಿತರಾದರು. ಚೀನಾ ದೇಶಕ್ಕೆ ರಫ್ತು ಮಾಡುವುದನ್ನು ನಿಲ್ಲಿಸಲಾಯಿತು, ಆದ್ದರಿಂದ ಆಯ್ದುಕೊಂಡು, ವಿಂಗಡಿಸಿ, ಶುದ್ಧಗೊಳಿಸಿ ಇಟ್ಟಿದ್ದ ಕೂದಲು ಅದನ್ನು ಆಯ್ದರವರ ಮನೆಗಳಲ್ಲಿಯೇ ಉಳಿಯಿತು.
ಸಾಲ ಕೊಟ್ಟವರು ಮನೆ ಬಾಗಿಲಲ್ಲಿ ಕಾಣಿಸಿಕೊಂಡರು, ಸಾಲ ತೀರಿಸುವಂತೆ ಪೀಡಿಸಿದರು. ತಿನ್ನಲೂ ಗತಿಯಿಲ್ಲದ ಮಕ್ಕಳು ಅಪೌಷ್ಟಿಕತೆಯನ್ನು ಅನುಭವಿಸಿದರು. ತ್ಯಾಜ್ಯ ಆಯುವವರು ಕೋವಿಡ್-19ಗಿಂತ ಹಸಿವೆಯಿಂದ ಸಾಯುವ ಪರಿಸ್ಥಿತಿ ಏರ್ಪಟ್ಟಿತು.
A small set of waste pickers engaged in door-to-door collection of dry waste (inorganic waste) continued their services as it was declared as essential services by the local government. Contaminated masks appeared in hundreds in the Dry Waste Collection Centres (the city’s decentralised dry waste management system). They faced the risk of infection with Covid-19 and also were challenged for food availability and problems in cash flows as they were not able to sell recyclables in the market at pay salary for the workers. The loss of livelihood and no timely salary hit them hard.
ಈ ಮುಂಚೆ ಜಾರಿಗೆ ಬಂದಿದ್ದ ನೋಟಿನ ಅಮಾನ್ಯೀಕರಣ ಮತ್ತು ಪ್ಲ್ಯಾಸ್ಟಿಕ್ ಉದ್ಯಮದಲ್ಲಿ ಆದ ಹಿಂಜರಿತದಿಂದಾಗಿ[4] ಈಗಾಗಲೇ ತ್ಯಾಜ್ಯ ಆಯುವವರ ಆದಾಯದಲ್ಲಿ ಕಡಿತವಾಗಿತ್ತು. ಇದು ನೇರವಾಗಿ ಮಕ್ಕಳು ಮತ್ತು ಮಹಿಳೆಯರಲ್ಲಿ ಅಪೌಷ್ಟಿಕತೆಗೆ ಎಡೆಮಾಡಿಕೊಟ್ಟಿತ್ತು.
ಹಸಿರುದಳ ಸಂಸ್ಥೆ ಈ ಅನುಭವಗಳಿಂದ ಕಲಿತದ್ದೇನೆಂದರೆ ಈ ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ತುರ್ತಾಗಿ ಸ್ಪಂದಿಸಬೇಕಾಗಿತ್ತು. ಹಸಿವಿನ ಪ್ರಮಾಣ ತಗ್ಗಿಸುವಿಕೆ, ವೈದ್ಯಕೀಯ ನೆರವು ಹಾಗೂ ಆWಅಅ ನಡೆಸಲು ಫಂಡ್ನ ಅಗತ್ಯವಿತ್ತು. ಇವು ಹಸಿರುದಳ ಸಂಸ್ಥೆÀಯ ಹಸ್ತಕ್ಷೇಪದ ಪ್ರಮುಕ ಗುರಿಯಾಗಿತ್ತು
ಹಸಿರು ದಳ ಮಕ್ಕಳು, ಹಾಲುಣಿಸುವ ತಾಯಂದಿರು ಮತ್ತು ಗರ್ಭಿಣಿಯರಿಗೆ ನೈರ್ಮಲ್ಯ ಕಿಟ್, ಪ್ರೋಟೀನ್ ಕಿಟ್ ಮತ್ತು ಇತರ ವಿಶೇಷ ಕಿಟ್-ಗಳನ್ನು ಕೊಡಮಾಡಿತು. ನೈರ್ಮಲ್ಯ ಕಿಟ್ಟುಗಳನ್ನು ಉದ್ದೇಶಿತ ಜನವರ್ಗದ ಅಗತ್ಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು ರೂಪಿಸಲಾಗಿದೆ.
ನಮ್ಮ ಬಳಿ ಸಮುದಾಯದ ಕುರಿತು ಉಪಯುಕ್ತ ದತ್ತಾಂಶಗಳಿದ್ದವು, ಹೀಗಾಗಿ ನಾವು ಮಾರ್ಚ್ 18ರಷ್ಟು ಮುಂಚಿತವಾಗಿಯೇ ಕ್ರಮಕ್ಕಿಳಿದೆವು, ಅತ್ಯಂತ ಹೆಚ್ಚು ದುರ್ಬಲ ಸ್ಥಿತಿಯಲ್ಲಿರುವ, ಎಂದರೆ ಸಾರ್ವಜನಿಕ ವಿತರಣಾ ವ್ಯವಸ್ಥೆಯ ವ್ಯಾಪ್ತಿಯಲ್ಲಿಲ್ಲದ ಸದಸ್ಯರಿಗೆ, ಒಂಟಿ ಪೋಷಕರು, ವೃದ್ಧಾಪ್ಯವೇತನದಲ್ಲಿರುವವರಿಗೆ ರೇಷನ್ ವಿತರಣೆ ಮಾಡಿದೆವು.th for the most vulnerable members of our community affected by covid-19 —those who had no access to the public distribution system (PDS – Public food security program) , single parents, people on old age pensions.
ಒಮ್ಮೆ ಅನಿರ್ದಿಷ್ಟ ಕಾಲದವರೆಗೆ ಲಾಕ್ ಡೌನ್ ಘೋಷಣೆ ಮಾಡಿದ ನಂತರ ಹಸಿರು ದಳ, ಇತರ ನಗರಗಳ ದುರ್ಬಲ ವರ್ಗದವರಿಗೂ ಒಂದು ತಿಂಗಳಿಗೆ ಆಗುವಷ್ಟು ದಿನಸಿಯನ್ನು ವಿತರಣೆ ಮಾಡುವ ನಿರ್ಧಾರವನ್ನು ಮಾಡಿತು. ಲಾಕ್ ಡೌನ್ ಮುಂದುವರಿಯುತ್ತಾ ಹೋದ ಹಾಗೆ ಅವರಿಗೆ ತಿಂಗಳ ದಿನಸಿಯನ್ನು ಕೊಡಮಾಡುವುದನ್ನು ಮುಂದುವರಿಸಲಾಯಿತು.
ಹಸಿರು ದಳ ಮಕ್ಕಳು, ಹಾಲುಣಿಸುವ ತಾಯಂದಿರು ಮತ್ತು ಗರ್ಭಿಣಿಯರಿಗೆ ನೈರ್ಮಲ್ಯ ಕಿಟ್, ಪ್ರೋಟೀನ್ ಕಿಟ್ ಮತ್ತು ಇತರ ವಿಶೇಷ ಕಿಟ್-ಗಳನ್ನು ಕೊಡಮಾಡಿತು. ನೈರ್ಮಲ್ಯ ಕಿಟ್ಟುಗಳನ್ನು ಉದ್ದೇಶಿತ ಜನವರ್ಗದ ಅಗತ್ಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು ರೂಪಿಸಲಾಗಿದೆ.
ನಮ್ಮ ಆರೋಗ್ಯ ಉಪಕ್ರಮದಿಂದಾಗಿ ನಮ್ಮಲ್ಲಿ ಈಗಾಗಲೇ ಇದ್ದ ಮಾಹಿತಿ ಮತ್ತು ಈ ಸಂದರ್ಭಕ್ಕಾಗಿಯೇ ತುರ್ತಾಗಿ ಸಂಗ್ರಹಿಸಿದ ದತ್ತಾಂಶಗಳನ್ನು ಆಧರಿಸಿ ನಿಯತವಾಗಿ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದವರಿಗೆ ಒಂದು ತಿಂಗಳ ಔಷಧಿಯನ್ನು ಒದಗಿಸಲಾಯಿತು. ನಂತರ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಿಂದ ದೊರೆಯುತ್ತಿದ್ದ ಅನುಕೂಲಗಳನ್ನೂ ಪಡೆಯಲಾಯಿತು. ಆದರೆ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದವರ ಔಷಧಿಗಳು ಉಚಿತವಾಗಿ ದೊರೆಯುತ್ತಿರಲಿಲ್ಲವಾದ್ದರಿಂದ ಅವರಿಗೆ ಬೆಂಬಲವನ್ನು ಒದಗಿಸಲಾಯಿತು.
ವಿತ್ ಬೆಂಗಳೂರು ಎಂಬ ನಾಗರಿಕ ಗುಂಪಿನ ಸಹಯೋಗದೊಂದಿಗೆ ಬಡ ವಲಸಿಗರು ಮತ್ತು ಸ್ಲಮ್ ನಿವಾಸಿಗಳಿಗೆ ದಿನಸಿ ಕಿಟ್ಟುಗಳನ್ನು ವಿತರಿಸಲಾಯಿತು.
ನಾಯಂಡನಹಳ್ಳಿಯಲ್ಲಿರುವ ಪುನರುತ್ಪಾದನಾ ಘಟಕದಲ್ಲಿ ವಿಂಗಡಣೆಯಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಕಾರ್ಮಿಕರಿಗೆ ಸೋಪು, ಸ್ಯಾನಿಟೈಜ಼ರುಗಳು, ಮಾಸ್ಕುಗಳು ಮತ್ತು ಒಂದು ಶೈಕ್ಷಣಿಕ ಭಿತ್ತಿಚಿತ್ರ (ಲಗತ್ತಿಸಿದೆ) ಇರುವ ಕಿಟ್ಟುಗಳನ್ನು ವಿತರಿಸಲಾಯಿತು. ಲಾಕ್ ಡೌನ್ ಮುಕ್ತಾಯವಾಗಿ ಜನ ಕೆಲಸಕ್ಕೆ ಮರಳ ತೊಡಗಿ, ಯಾವುದೆ ನೈರ್ಮಲ್ಯ ಮತ್ತು ಸ್ಯಾನಿಟೈಜರ್ ಸಾಮಗ್ರಿ ಮತ್ತು ಪಿಪಿಇಗಳಿಲ್ಲದ ಸ್ಥಿತಿಯಲ್ಲಿ ಇದು ಹೆಚ್ಚು ಪ್ರಯೋಜನಕ್ಕೆ ಬಂದಿತು.
ಪೋಸ್ಟರನ್ನು ಡೌನ್ ಲೋಡ್ ಮಾಡಿಕೊಳ್ಳಿತ್ಯಾಜ್ಯ ಆಯುವವರ ಮಕ್ಕಳಲ್ಲಿ ನಾವು ಭೇಟಿ ಮಾಡಿದವರಿಗೆಲ್ಲಾ ಕನ್ನಡದಲ್ಲಿ ರೂಪಿಸಲಾದ ಕೋವಿಡ್-19 ಕುರಿತಾದ ಪುಸ್ತಕವನ್ನು ವಿತರಣೆ ಮಾಡಿದ್ದೇವೆ.
ಪುಸ್ತಕವನ್ನು ಡೌನ್ ಲೋಡ್ ಮಾಡಿಕೊಳ್ಳಿಎರಡು ಸ್ಥಳೀಯ ದಿನಪತ್ರಿಕೆಗಳು ನೆಲಮಂಗಲ ಮತ್ತು ಚಿಕ್ಕಬಳ್ಳಾಪುರದ ಬಳಿಯ ತ್ಯಾಜ್ಯ ಆಯುವವರು ಅನುಭವಿಸುತ್ತಿರುವ ಸಂಕಷ್ಟಗಳ ಬಗ್ಗೆ, ಯಾರಿಂದಲೂ ಯಾವುದೇ ಬಗೆಯ ಆಹಾರ ಬೆಂಬಲವನ್ನು ಪಡೆಯದೇ ಇರುವ ಬಗ್ಗೆ ಬರೆದವು. ಹಸಿರು ದಳ ತಕ್ಷಣ ಇದಕ್ಕೆ ಪ್ರತಿಕ್ರಿಯಿಸಿ, ಎರಡೂ ಸ್ಥಳಗಳಲ್ಲಿಯ ತ್ಯಾಜ್ಯ ಆಯುವವರ ಕುಟುಂಬಗಳಿಗೆ ಬೆಂಬಲವನ್ನು ಒದಗಿಸಿತು.
ಹಸಿರು ದಳ ಒಣ ತ್ಯಾಜ್ಯ ಸಂಗ್ರಹಣ ಕೇಂದ್ರಗಳನ್ನು ಕಾರ್ಯಚಾಲಿಸುತ್ತಿದ್ದವರಿಗೆ ಅವರು ತಮ್ಮ ಕೆಲಸವನ್ನು ಮುಂದುವರಿಸಲು ಸಾಧ್ಯವಾಗುವಂತೆ ಅವರಿಗೆ ದಿನಸಿ ಕಿಟ್ಟುಗಳು ಮತ್ತು ಇತರ ಹಣಕಾಸಿನ ಬೆಂಬಲವನ್ನು ನೀಡಿತು. ಲಾಕ್ ಡೌನಿನ ಆರಂಭದ ವಾರಗಳಲ್ಲಿ ನಾವು 15 DWCCಗಳಿಗೆ ಅವರ ಡೀಸೆಲ್ ವೆಚ್ಚವನ್ನು ಒಂದು ವಾರದ ವರೆಗೆ ಭರಿಸಿದೆವು. ಅವರು ಜನರಿಗೆ ಒದಗಿಸುತ್ತಿದ್ದ ಸೇವೆಗಳು ನಿಲ್ಲದಿರಲಿ ಎಂಬುದು ಉದ್ದೇಶವಾಗಿತ್ತು. ಸಂಸ್ಥೆಯಿಂದ ಅವರಿಗೆ ರಕ್ಷಣಾ ಸಾಧನಗಳು ಮತ್ತು ಸ್ಯಾನಿಟೈಜ಼ರುಗಳನ್ನೂ ಒದಗಿಸಲಾಗಿತ್ತು. ಕೆಲವು ದಿನಗಳ ಕಾಲ DWCC ಕಾರ್ಯಕರ್ತರಿಗೆ ಅಡುಗೆ ಮಾಡಿದ ಆಹಾರವನ್ನೂ ಒದಗಿಸಲಾಯಿತು.
ಇದರ ಜೊತೆಯಲ್ಲಿ, ಬಳಸಿದ ಮಾಸ್ಕುಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವ ಕುರಿತು ನಾಗರಿಕರಲ್ಲಿ ಜಾಗೃತಿಯನ್ನು ಮೂಡಿಸಲು ಪೋಸ್ಟರುಗಳು ಮತ್ತು ವೀಡಿಯೋವನ್ನೂ ಬಿಡುಗಡೆ ಮಾಡಲಾಯಿತು.
ಆನ್ ಲೈನಿನಲ್ಲಿ ದೇಣಿಗೆ ಸಂಗ್ರಹಿಸಿದ್ದು ನಮ್ಮ ಮಟ್ಟಿಗೆ ಮೊದಲ ಅನುಭವವಾಗಿತ್ತು. ಆನ್ ಲೈನಿನಲ್ಲಿ ಪ್ರಕಟಿಸಿದ ಪೋಸ್ಟರ್ ಅನೇಕರ ಗಮನವನ್ನು ಸೆಳೆಯಿತು, ದೇಣಿಗೆಗಳು ಬರತೊಡಗಿದವು. ಮೊದಲು, ನಮಗೆ ಅಚ್ಚರಿಯಾಯಿತು, ಜನ ಕೋವಿಡ್-19 ಪರಿಹಾರಕ್ಕಾಗಿ ದೇಣಿಗೆ ನೀಡಲು ಉತ್ಸಾಹಿತರಾಗಿದ್ದಾರೆ ಎಂದು ಆಲೋಚಿಸಿದೆವು; ನಂತರ ಅರಿವಿಗೆ ಬಂದ ವಿಚಾರವೆಂದರೆ ಬೆಂಗಳೂರಿನಲ್ಲಿ ಹಸಿರು ದಳವು, ತಾವು ಕೊಟ್ಟ ದೇಣಿಗೆಯನ್ನು ಜವಾಬ್ದಾರಿಯುತವಾಗಿ ಸದ್ವಿನಿಯೋಗ ಮಾಡುತ್ತದೆ ಎಂಬ ನಂಬಿಕೆ ಸಾರ್ವಜನಿಕರಿಗೆ ಇದ್ದದ್ದೇ ಇದಕ್ಕೆ ಕಾರಣ ಎಂದು. ಈ ಕ್ಷೇತ್ರದಲ್ಲಿ ಒಂದು ದಶಕ ಕಾಲದ ಮಾಡಿದ ನಮ್ಮ ಕೆಲಸ ಸಾರ್ವಜನಿಕರಲ್ಲಿ ಮತ್ತು ದಾನಿಗಳಲ್ಲಿ ಸಂಸ್ಥೆಯ ಕುರಿತು ವಿಶ್ವಾಸಾರ್ಹತೆಯನ್ನು ಮೂಡಿಸಿತ್ತು.
ಪೋಸ್ಟರನ್ನು ಡೌನ್ ಲೋಡ್ ಮಾಡಿಕೊಳ್ಳಿಕೋವಿಡ್-19 ಸಂಬಂಧ ಜನರ ಓಡಾಟದ ಮೇಲೆ ತೀವ್ರ ನಿರ್ಬಂಧವನ್ನು ಹೇರಲಾಗಿತ್ತು, ಹಸಿರು ದಳದ ಸದಸ್ಯರು ಮತ್ತು ಸ್ವಯಂಸೇವಕರಿಗೆ ಮತ್ತು ವಾಹನಗಳಿಗೆ ಓಡಾಡುವ ಅನುಮತಿಯ ಪಾಸುಗಳನ್ನು ದೊರಕಿಸಿಕೊಳ್ಳುವುದು ಬಹುದೊಡ್ಡ ಸವಾಲಾಗಿತ್ತು. ನಾವು ಹಮ್ಮಿಕೊಂಡಿದ್ದ ಪರಿಹಾರ ಕಾರ್ಯಕ್ಕಾಗಿ ಬಹುದೊಡ್ಡ ಸಂಖ್ಯೆಯಲ್ಲಿ ಸ್ವಯಂಸೇವಕರ ಅಗತ್ಯವಿತ್ತು. ಸಂಸ್ಥೆಗೆ ಸರಕಾರದಿಂದ ಕೇವಲ 40 ಪಾಸುಗಳನ್ನು ಮಾತ್ರ ನೀಡಲಾಗಿತ್ತು, ಕಾರ್ಯಾಚರಣೆಯ ವ್ಯಾಪಕತೆಯನ್ನು ನೋಡಿದಾಗ ಇವು ಯಾವುದಕ್ಕೂ ಸಾಲುವುದಿಲ್ಲ ಎಂಬುದು ಸ್ಪಷ್ಟವಾಗಿತ್ತು. ಪ್ಯಾಕಿಂಗ್ ಕೇಂದ್ರಗಳ ಸುತ್ತಮುತ್ತ ಇರುವ ನಾಗರಿಕ ಸಂಘಗಳ ಬಳಿ ಹೋದೆವು. ಇದರಿಂದಾಗಿ ಸ್ವಯಂಸೇವಕರು ತಮ್ಮ ಮನೆಗಳಿಂದ ಪ್ಯಾಕಿಂಗ್ ಕೇಂದ್ರಗಳಿಗೆ ಹೋಗುವುದಕ್ಕೆ ಸಾಧ್ಯವಾಯಿತು.
ಲಾಕ್ ಡೌನ್ ಸಮಯದಲ್ಲಿ ಮಾರುಕಟ್ಟೆಗಳು ಮುಚ್ಚಿದ್ದವು ಮತ್ತು ಸಾರಿಗೆಯೂ ಇರಲಿಲ್ಲವಾದ್ದರಿಂದ ಆಹಾರ ಧಾನ್ಯಗಳನ್ನು ಕೊಂಡುಕೊಳ್ಳುವುದು ಬಹುದೊಡ್ಡ ಸವಾಲಾಗಿತ್ತು. ಸಾರಿಗೆ ಮತ್ತು ಕೆಲಸಗಾರರ ಕೊರತೆಯಿಂದಾಗಿ ಮಾರುಕಟ್ಟೆಗಳಲ್ಲಿಯೂ ದಿನಸಿ ಮತ್ತು ಇತರ ಅಗತ್ಯ ವಸ್ತುಗಳ ಕೊರತೆ ಉಂಟಾಯಿತು. ಮೊದಮೊದಲು ಧಾನ್ಯಗಳನ್ನು ಸರಕಾರ ಸಗಟು ಮಾರುಕಟ್ಟೆಗಳಿಂದ ಕೊಂಡುಕೊಳ್ಳಲಾಯಿತು, ಅಲ್ಲಿಯೂ ದಾಸ್ತಾನು ಖಾಲಿಯಾದ ನಂತರ ನಗರದಿಂದ ಹಲವಾರು ಕಿಲೋಮೀಟರ್ ದೂರದಲ್ಲಿರುವ ಮಿಲ್ಲುಗಳಿಂದ ನೇರವಾಗಿ ಖರೀದಿಸಲಾಯಿತು.
The other challenge was setting up distribution channels for Covid-19 relief. The special food kits were designed on the food habits of beneficiaries. Hasiru Dala had to ensure that the relevant kits are being distributed in specific areas and that there was no duplication of distribution. The community leaders made sure that the distribution was transparent. The state and municipal governments were supportive in the distribution of relief material. In one instance, the team had to take help of police personnel when their vehicle was surrounded by a desperate crowd.
ಹಸಿರು ದಳ ವಿಪತ್ತಿನ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಯಿತು, ತಂಡದ ಪ್ರತಿಯೊಬ್ಬ ಸದಸ್ಯರೂ ತಮ್ಮ ಕರ್ತವ್ಯ ವ್ಯಾಪ್ತಿಯನ್ನೂ ಮೀರಿ ಪರಿಹಾರ ಉಪಕ್ರಮಗಳಲ್ಲಿ ಭಾಗವಹಿಸಿದರು. ಸಂಸ್ಥೆಗೆ ಸಮರ್ಥ ತಂಡಗಳನ್ನು ಕಟ್ಟುವಲ್ಲಿ ಇದೊಂದು ಅಪೂರ್ವವಾದ ಅವಕಾಶವೂ ಆಗಿತ್ತು.
ಇದರಿಂದಾಗಿ ನಾವು ನಗರಲ್ಲಿರುವ ಇನ್ನಷ್ಟು ತ್ಯಾಜ್ಯ ಆಯುವವರನ್ನು, ದೂರದ ಪ್ರದೇಶಗಳಲ್ಲಿ ಬದುಕುತ್ತಿರುವವರು ಅಥವಾ ಸಾಂಕ್ರಾಮಿಕದಿಂದಾಗಿ ನಗರ ಬಿಟ್ಟು ಹೊರಟುಹೋಗಿದ್ದಾರೆ ಎಂದುಕೊಂಡಿದ್ದ ಜನರನ್ನು ಗುರುತಿಸಲು ಸಾಧ್ಯವಾಯಿತು. 500 ಕುಟುಂಬಗಳು ಈಗ ನಮ್ಮ ಸಂಪರ್ಕದಲ್ಲಿದ್ದು ಕೆಲಸ ಮುಂದುವರಿದಿದೆ.
ಸಂಸ್ಥೆಯ ಎದುರು ಇರುವ ಅತಿದೊಡ್ಡ ಸವಾಲು ಎಂದರೆ ತ್ಯಾಜ್ಯ ಆಯುವವರು ತಮ್ಮ ಆರ್ಥಿಕ ಚಟುವಟಿಕೆಯನ್ನು ಪುನಾರಂಭಿಸುವುದಾಗಿದೆ. ಇಲ್ಲವಾದರೆ, ತ್ಯಾಜ್ಯ ಆಯುವವರ ಕುಟುಂಬಗಳು ಸಾಲದಲ್ಲಿ ಮುಳುಗುವ ಮತ್ತು ಅವರ ಮಕ್ಕಳು ಶಾಲೆಗಳನ್ನು ಬಿಟ್ಟುಬಿಡುವ ಸಾಧ್ಯತೆಗಳು ಹೆಚ್ಚಾಗಿವೆ.
ಪುನರುತ್ಪಾದನಾ ಉದ್ಯಮವನ್ನು ಮತ್ತೊಮ್ಮೆ ಕಾರ್ಯಾರಂಭಿಸುವಂತೆ ಮಾಡುವ ಪ್ರಯತ್ನಗಳು ನಡೆದಿವೆ; ಮತ್ತು ಈ ನಿಟ್ಟಿನಲ್ಲಿ ಪುನರುತ್ಪಾದನಾ ಉದ್ಯಮವನ್ನು (ಆಹಾರ ಉದ್ಯಮದ ರೀತಿಯಲ್ಲಿ) ಅಗತ್ಯ ಸೇವಾ ಕಾರ್ಯಾಚರಣೆಯೆಂದೂ ಮತ್ತು ಹೂಡಿಕೆಯ ಅಗತ್ಯವಿರುವ MSME ಎಂಬಂತೆ ಪರಿಗಣಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ.
ತ್ಯಾಜ್ಯವನ್ನು ಮನೆಗಳಿಂದ ಸಂಗ್ರಹಿಸುವುದನ್ನು ಅಗತ್ಯ ಸೇವೆಯೆಂದು ಘೋಷಿಸಿದ್ದರೂ ಪುನರುತ್ಪಾದನೆ ಅಥವಾ ತ್ಯಾಜ್ಯದ ಸಂಸ್ಕರಣೆಯನ್ನು ಹಾಗೆಂದು ಘೋಷಿಸಿರಲಿಲ್ಲ. ತ್ಯಾಜ್ಯ ಆಯುವವರು ಕೈಗಳಿಗೆ ಕೆಲಸವಿಲ್ಲ, ಗೋಡೌನುಗಳು ತ್ಯಾಜ್ಯದಿಂದ ತುಂಬಿತುಳುಕಾಡುತ್ತಿವೆ. ಒಮ್ಮೆ ಲಾಕ್ ಡೌನನ್ನು ತೆರವು ಮಾಡಿದ ನಂತರವೂ, ಆರ್ಥಿಕ ಚಟುವಟಿಕೆಗಳಲ್ಲಿ ಸರ್ವೇಸಾಮಾನ್ಯವಾದ ನಿಧಾನಗತಿ ಇರುವುದರಿಂದ ಸ್ಕ್ರ್ಯಾಪ್ ಮತ್ತು ಇತರ ಘನ ತ್ಯಾಜ್ಯಗಳಿಗೆ ಬೇಡಿಕೆ ಕಡಿಮೆಯಾಗಿದೆ. ಈಗಲೂ DWCCಗಳ ವಾಹನಗಳು ಒಣ ತ್ಯಾಜ್ಯವನ್ನು ಸಂಗ್ರಹಿಸಲು ಹೋಗುತ್ತಿವೆ. ಸ್ಥಳಾವಕಾಶವಿಲ್ಲದಿದ್ದರೂ, ಪುನರುತ್ಪಾದನೆಯಿಲ್ಲದಿದ್ದರೂ ಅವರು ಸಾಮಗ್ರಿಯನ್ನು ದಾಸ್ತಾನು ಮಾಡುತ್ತಲೇ ಇದ್ದಾರೆ.
ಹಸಿರು ದಳವು ತಕ್ಷಣದ ವೈದ್ಯಕೀಯ ಗಮನ ಅಗತ್ಯವಿರುವವರು ಮತ್ತು ಔಷಧಿಗಳ ಮೇಲೆ ನಿರಂತರವಾಗಿ ಅವಲಂಬಿತವಾಗಿರುವವರಿಗೆ ಸಹಾಯವನ್ನು ಒದಗಿಸುತ್ತಿದೆ. ನಿಗದಿತ ಅಂಗಡಿಗಳಿಂದ ಅವರು ಔಷಧಿಯನ್ನು ಕೊಂಡುಕೊಳ್ಳಲು ಸಾಧ್ಯವಾಗುವಂತೆ ಅವರಿಗೆ ಹಣಕಾಸಿನ ನೆರವನ್ನು ನೀಡಲಾಗುತ್ತಿದೆ. ಪೋನಿನ ಮೇಲೆ ಡಾಕ್ಟರರು ಮತ್ತು ಇತರ ವೈದ್ಯಕೀಯ ಪರಿಣತರ ನೆರವು ಸಿಗುವ ಹಾಗೆ ಮಾಡಲಾಗುತ್ತಿದೆ. ಇಂಥ ಸಮಾಲೋಚನೆಗಳಲ್ಲಿ ಪೋನಿನ ಮೇಲೆ ತುರ್ತು ವೈದ್ಯಕೀಯ ಸಲಹೆಗಳು ಮತ್ತು ಔಷಧಿಗಳ ಶಿಫಾರಸ್ಸನ್ನು ನೀಡಲಾಗುತ್ತಿದೆ. ದೀರ್ಘಕಾಲೀನ ಉಪಕ್ರಮವು ಸಮುದಾಯದೊಳಗೆಯೇ ಬೆಂಬಲವನ್ನು ಸೃಷ್ಟಿಸುವುದರಲ್ಲಿ ತೊಡಗಿದೆ.
ವುಹಾನ್ ನಲ್ಲಿ ನಡೆಸಿದ ಅಧ್ಯಯನಗಳ ಪ್ರಕಾರ ಹಾಗೂ ಜಗತ್ತಿನಾದ್ಯಂತ ಕೊರೋನಾ ಪೀಡಿತ ವ್ಯಕ್ತಿ ಗಳಿಗೆ ಚಿಕಿತ್ಸೆ ನೀಡಿದ ವೈದ್ಯರು ಹೇಳುವ ಪ್ರಕಾರ ಶೇಕಡಾ 48% ಕಿಂತ ಹೆಚ್ಚಿನ ರೋಗಿಗಳು ಚಿಕಿತ್ಸೆಯ ನಂತರ ಕೂಡ ಸಾವನಪ್ಪಲು ಅವರಿಗಿದ್ದ ಕೋಮಾರ್ಬಿಡಿಟಿ ಕಾರಣ. ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಖಾಯಿಲೆ ಮುಂತಾದ ಕೋಮಾರ್ಬಿಡಿಟಿ ಹೊಂದಿರುವ ರೋಗಿಗಳಿಗೆ ಕೊರೋನಾ ತಗುಲುವ ಅಪಾಯ ಹೆಚ್ಚಿರುತ್ತದೆ. ಹಾಗೂ ರೋಗನಿರೋಧÀಕ ಶಕ್ತಿ ಕಡಿಮೆ ಇರುವವರಿಗೂ ಕೊರೊನಾ ಬಹುಬೇಗ ತಗುಲುವ ಅಪಾಯವಿರುತ್ತದೆ. ಹಾಗೂ ಕೊರೋನ ತಗಲುವ ಮುಂಚೆಯೇ ಈ ಕೋಮಾರ್ಬಿಡಿಟಿ ಗುಣಗಳನ್ನು ಹೊಂದಿರುವವರಿಗೆ ಚಿಕಿತ್ಸೆ ನೀಡದಿದ್ದರೆ ಕೊರೋನಾಗೆ ಬಲಿಯಾಗುವÀ ಪ್ರಮಾಣ ಜಾಸ್ತಿಯಾಗುತ್ತದೆ. ಹೀಗಾಗಿ ನಾವು ಆರಂಭದಲ್ಲಿಯೇ ಇಂಥವರಿಗೆ ಸೂಕ್ತ ಚಿಕಿತ್ಸೆ ನೀಡಬೇಕಾಗುತ್ತದೆ.
ಈ ಶೋಚನೀಯ ಸ್ಥಿತಿಯಲ್ಲಿ ನಾವು ಆರೋಗ್ಯ ಶಿಬಿರಗಳನ್ನ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಏಕೆಂದೆರೆ ಹೆಚ್ಚಿನ ಪ್ರಮಾಣದಲ್ಲಿ ಜನರು ಗುಂಪುಗೂಡುವಂತಿರಲಿಲ್ಲ. ಈ ವೇಳೆಯೇ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನ (PHC)ಫಿವರ್ ಕ್ಲೀನಿಕ್‍ಗಳನ್ನಾಗಿ ಪರಿವರ್ತಿಸಲಾಗಿತ್ತು. ಹೀಗಾಗಿ ಅಸಂಘಟಿತ ಕಾರ್ಮಿಕರಿಗೆ ಮೂಲಭೂತ ಆರೋಗ್ಯ ಸೌಲಭ್ಯಗಳನ್ನ ಪಡೆಯಲು ತುಂಬಾ ಕಷ್ಟವಾಗುತ್ತಿತ್ತು. ಈ ಮಧುಮೇಹ, ಅಧಿಕ ರಕ್ತದೊತ್ತಡದಂತಹ ರೋಗಗಳು ಒಬ್ಬರಿಂದ ಮತ್ತೊಬ್ಬರಿಗೆ ಹರಡುವಂತಹ ಖಾಯಿಲೆಯಾಗಿರಲಿಲ್ಲ. ಹೀಗಾಗಿ ಇಂತವರು ಹತ್ತಿರದ ಸರ್ಕಾರಿ ಆಸ್ಪತ್ರೆ ಅಥವಾ ಪಿಹೆಚ್‍ಸಿ ಸೆಂಟರ್‍ಗಳಲ್ಲಿ ನಿಯಮಿತವಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಕೊರೋನಾ ಶುರುವಾದಾಗ ಸೋಂಕು ತಗುಲುವ ಭಯಕ್ಕೆ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯಲು ಹೆದರುತ್ತಿದ್ದರು. ಇಂಥಾ ಶೋಚನೀಯ ಸ್ಥಿತಿಯಲ್ಲಿ ಎಲ್ಲರ ಗಮನವೂ ಕೊರೊನಾ ಸೋಂಕಿನ ಮೇಲೆಯೇ ಇತ್ತು. ಹೀಗಾಗಿ ಪಿಹೆಚ್‍ಸಿಗಳಲ್ಲಿ ಬೇರೆ ರೋಗ ಲಕ್ಷಣಗಳಿಗೆ ನಿಯಮಿತ ಔಷಧಿಗಳು ಸರಿಯಾಗಿ ಸಿಗುತ್ತಿರಲಿಲ್ಲ.
ಈ ಎಲ್ಲಾ ಕಾರಣಗಳಿಂದಾಗಿ ಹಸಿರುದಳ ಸಂಸ್ಥೆಯು ಕೊಳಗೇರಿ ಸಮುದಾಯಗಳಿಗೆ ಆರೋಗ್ಯ ಸೌಲಭ್ಯ ನೀಡಲು ಅದೇ ಸಮುದಾಯದಲ್ಲಿದ್ದವರನ್ನೇ ಆರೋಗ್ಯ ಸ್ವಯಂ ಸೇವಕರನ್ನಾಗಿ ತೆಗೆದುಕೊಳ್ಳಲಾಯಿತು. ಸಮುದಾಯದಲ್ಲಿರುವ ಜನರು ನಂಬುವಂತಹ ಸ್ವಯಂ ಸೇವಕರನ್ನೇ ಹಸಿರುದಳ ಆಯ್ಕೆ ಮಾಡಿಕೊಂಡು ಅವರಿಗೆ ಮೂಲಭೂತ ಆರೋಗ್ಯ ತಪಾಸಣೆ ಮಾಡಲು ತರಭೇತಿ ನೀಡಲಾಯಿತು. ದೇಹದತಾಪಮಾನ, ರಕ್ತದೊತ್ತಡ, ರಕ್ತದಲ್ಲಿನ ಸಕ್ಕgಯ ಪ್ರಮಾಣÉ, ಎತ್ತರ ಹಾಗೂ ತೂಕ, ರಕ್ತದಲ್ಲಿನ ಆಮ್ಲಜನPದÀ ಪ್ರಮಾಣ ಇಂತವುಗಳನ್ನು ತಪಾಸಣೆ ಮಾಡುವ ತರಭೇತಿ ನೀಡಿಲಾಯಿತು ಹಾಗೂ ಇದಕ್ಕೆ ಬೇಕಾದ ವಸ್ತುಗಳನ್ನ ನೀಡಲಾಯಿತು. ಇನ್ನು ಆರೋಗ್ಯ ಸ್ವಯಂ ಸೇವಕರು ತಮ್ಮ ಸಮುದಾಯದಲ್ಲಿನ ಜನರ ಸಮೀಕ್ಷೆ ನಡೆಸಿ, ಕೋಮಾರ್ಬಿಡಿಟಿ ಗುಣ ಲಕ್ಷಣಗಳಿರುವವರನ್ನ ಗಮನಕ್ಕೆ ತರುವುದು. Àಹಾಗೂ ಇಂತವರನ್ನು ಹತ್ತಿರದ ಆಸ್ಪತ್ರೆಗೆ ಕಳುಹಿಸುವುದು ಇವರ ಕೆಲಸವಾಗಿತ್ತು. ಜೊತೆಗೆ ಅಗತ್ಯವಿರುವ ರೋಗಿಗೆ ದೂರವಾಣಿ ಸಂಪರ್ಕದ ಮೂಲಕ ವೈದ್ಯರೊಂದಿಗೆ ಕನ್ಸಲ್ಟ್ ಮಾಡಿಸುತ್ತಿದ್ದರು.
ಲಾಕ್ ಡೌನ್, ತ್ಯಾಜ್ಯ ಆಯುವವರು ಮತ್ತು ಅನೌಪಚಾರಿಕ ತ್ಯಾಜ್ಯ ಸಂಗ್ರಹಕಾರರ ಮಕ್ಕಳನ್ನೂ ತೀವ್ರವಾಗಿ ಪ್ರಭಾವಿಸಿದೆ. ಶಾಲೆಗಳು ಮುಚ್ಚಿವೆಯಾದರೂ ಮಕ್ಕಳು ಶಾಲೆಯನ್ನೇ ಬಿಟ್ಟುಬಿಡದಂತೆ ಮಾಡುವ ಪ್ರಯತ್ನ ನಡೆದಿದೆ. ಕೆಲವು ಕಡೆ ಆನ್ ಲೈನ್ ಪಾಠಗಳು ನಡೆದಿವೆ, ಆದರೆ ಹಣಕಾಸು ಮತ್ತು ಇತರ ತೊಡಕುಗಳಿಂದಾಗಿ ಆನ್ ಲೈನ್ ಪಾಠಗಳಿಂದ ಈ ಮಕ್ಕಳು ಪ್ರಯೋಜನ ಪಡೆಯುವುದಕ್ಕೆ ಸಾಧ್ಯವಾಗುತ್ತಿಲ್ಲ.
ಲಾಕ್ ಡೌನ್ ಅವಧಿಯಲ್ಲಿ ಬುಗುರಿ ಸಮುದಾಯ ಗ್ರಂಥಾಲಯವು ಕೆಲವು ಮಕ್ಕಳಿಗಾದರೂ ಆನ್ ಲೈನ್ ತರಗತಿಗಳು ಲಭ್ಯವಾಗುವಂತೆ ಮಾಡಿ, ಅವರಿಗೆ ಕಲಿಯುವ ಅವಕಾಶವನ್ನು ಕಲ್ಪಿಸಿದವು. ಒಮ್ಮೆ ಶಾಲೆಗಳು ತೆರೆದಾಗಲೂ ಶಾಲೆಯನ್ನು ಬಿಡುವವರ ಸಂಖ್ಯೆ, ಅದರಲ್ಲೂ ಮುಖ್ಯವಾಗಿ ಹುಡುಗಿಯರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇರುವುದು ಸಂಸ್ಥೆಯ ಬಹುದೊಡ್ಡ ಕಾಳಜಿಯಾಗಿದೆ. ಇದನ್ನು ತಪ್ಪಿಸಲು ಹಸಿರು ದಳ ನಾಗರಿಕರು, ಮತ್ತು ಸಂಸ್ಥೆಗಳನ್ನು ವಿದ್ಯಾರ್ಥಿವೇತನಗಳನ್ನು ಸ್ಥಾಪಿಸುವಂತೆ ಮನವೊಲಿಸುವ ಕಾರ್ಯದಲ್ಲಿ ಹಸಿರು ದಳ ತೊಡಗಿದೆ.