ಮುಖ್ಯವಾಹಿನಿ ತ್ಯಾಜ್ಯ ವ್ಯವಸ್ಥೆ ಏನು?

ತ್ಯಾಜ್ಯವನ್ನು ನಿರ್ವಹಿಸುವುದು ಮುನಿಸಿಪಲ್ ಮತ್ತು ಸ್ಥಳೀಯ ಸರಕಾರಗಳ ಜವಾಬ್ದಾರಿಯಾಗಿದೆ. ಇದರಲ್ಲಿ, ಉತ್ಪತ್ತಿಯಾಗುವ ತಾಣದಿಂದ ತ್ಯಾಜ್ಯವನ್ನು ಸಂಗ್ರಹಿಸುವುದರಿಂದ ಹಿಡಿದು ಅದನ್ನು ಸೂಕ್ತವಾದ ವಿಲೇವಾರಿ ತಾಣಕ್ಕೆ ತಲುಪಿಸುವವರೆಗೆ(ಪುನರುತ್ಪಾದನೆ, ವೈಜ್ಞಾನಿಕ ಭೂಭರ್ತಿ, ಬಯೊಮೆಡಿಕಲ್ ತ್ಯಾಜ್ಯ ಸಂಸ್ಕರಣೆ ಇತ್ಯಾದಿ) ಹಲವು ಕಾರ್ಯಾಚರಣೆಗಳನ್ನು ಒಳಗೊಂಡಿರುತ್ತದೆ.

ಎಂದರೆ, ತ್ಯಾಜ್ಯವನ್ನು ಮನೆಮನೆಯಿಂದ ಸಂಗ್ರಹಿಸುವುದು, ಸಂಸ್ಕರಣೆ ಮಾಡುವ ಕೇಂದ್ರಕ್ಕೆ ಅದನ್ನು ಸಾಗಿಸುವುದು, ತ್ಯಾಜ್ಯದಿಂದ ಸಾಧ್ಯವಾಗುವ ಸಂಪನ್ಮೂಲಗಳನ್ನು ಹಿಂದಕ್ಕೆ ಪಡೆಯುವುದು ಮತ್ತು ಉಳಿದದ್ದನ್ನು ವೈಜ್ಞಾನಿಕ ವಿಧಾನದ ಮೂಲಕ ವಿಲೇವಾರಿ ಮಾಡುವುದು. ಸ್ಥಳೀಯ ಸಂಸ್ಥೆಯು ತಮ್ಮ ಈ ಜವಾಬ್ದಾರಿಯನ್ನು ಪ್ರತ್ಯಕ್ಷವಾಗಿ ತಾನೇ ನಿರ್ವಹಿಸಬಹುದು ಅಥವಾ ಬೇರೊಬ್ಬ ವ್ಯಕ್ತಿಗೆ ತ್ಯಾಜ್ಯ ನಿರ್ವಹಣೆಯ ಗುತ್ತಿಗೆಯನ್ನು ನೀಡಬಹುದು. ಇದಕ್ಕಾಗಿ ನಾಗರಿಕರಿಂದ ಆಸ್ತಿ ತೆರಿಗೆಗಳ ಮೂಲಕ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಶುಲ್ಕವನ್ನು ವಸೂಲಿ ಮಾಡಬಹುದು.

ಬಾಧ್ಯಸ್ಥರು ಯಾರು?

Hasiru Dala The Waste Ecosystem Players
Himani Airan, Aasra Welfare Association | Concept developed by Hasiru Dala for AIW EPR Team

ಆಕರ: ಅಲಯನ್ಸ್ ಆಫ್ ಇಂಡಿಯನ್ ವೇಸ್ಟ್ ಪಿಕ್ಕರ್ಸ್

ಭಾರತದಲ್ಲಿ ತ್ಯಾಜ್ಯ ನಿರ್ವಹಣೆಯಲ್ಲಿ ಎರಡು ಧಾರೆಗಳಿವೆ: ಒಂದು ಔಪಚಾರಿಕ ವ್ಯವಸ್ಥೆ, ಇನ್ನೊಂದು ಅನೌಪಚಾರಿಕ ವ್ಯವಸ್ಥೆ. ಔಪಚಾರಿಕ ವ್ಯವಸ್ಥೆಗೆ ಹಣಕಾಸಿನ ಸೌಲಭ್ಯ ಇರುತ್ತದೆ, ಅದು ಸ್ಥಳೀಯ ಸರಕಾರಗಳ ನಿಯಂತ್ರಣದಲ್ಲಿ ನಿರ್ವಹಿಸಲ್ಪಡುತ್ತದೆ. ಇಂಥ ನಿರ್ವಹಣೆ ಎಲ್ಲ ಬಗೆಯ ತ್ಯಾಜ್ಯವನ್ನು ಒಳಗೊಂಡಿರುತ್ತದೆ. ಜೈವಿಕ ತ್ಯಾಜ್ಯ, ಅಜೈವಿಕ ತ್ಯಾಜ್ಯ, ಮನೆ/ಸ್ಥಳೀಯ ಅಪಾಯಕಾರಿ ತ್ಯಾಜ್ಯ, ತೋಟಗಾರಿಕೆ ತ್ಯಾಜ್ಯ, ನಿರ್ಮಾಣ ಅವಶೇಷಗಳ ತ್ಯಾಜ್ಯ ಇತ್ಯಾದಿ.

ಇನ್ನಷ್ಟು ಓದಿ

ತ್ಯಾಜ್ಯದ ಅರ್ಥಶಾಸ್ತ್ರ

ಮಾರಾಟದ ಬೆಲೆ ಪ್ರವೃತ್ತಿಗಳು (ಆಗಸ್ಟ್ 2014ರಿಂದ 2017)

Hasiru Dala Sale Trend

ಅವಲೋಕನಗಳು:

  • ಪ್ಲ್ಯಾಸ್ಟಿಕ್ ಬೆಲೆಯು 2014ರಲ್ಲಿ ರೂ.30ಇದ್ದದ್ದು, 2017ರಲ್ಲಿ ಕೆ.ಜಿ.ಗೆ ರೂ.15ಕ್ಕೆ, ಎಂದರೆ 50%ರಷ್ಟು ಇಳಿಯಿತು.
  • PET ಅನಿಶ್ಛಿತವಾಗಿದೆ; ಆದರೆ ಸ್ವಲ್ಪ ಚೇತರಿಕೆ ಕಾಣುತ್ತಿದೆ
  • ವ್ಹೈಟ್ ರೆಕಾರ್ಡ್(ರೂ.11) ಮತ್ತು ಕಾರ್ಡ್ ಬೋರ್ಡ್(ರೂ.8) ಬೆಲೆ ಸ್ಥಿರವಾಗಿವೆ.

ಪ್ಯಾಕೇಜಿಂಗಿನಲ್ಲಿ ಹಲವು ಪ್ರಕಾರಗಳನ್ನು ಪುನರುತ್ಪಾದನೆಗೆ ಬಳಸಲು ಆಗುವುದಿಲ್ಲ. ಘನ ತ್ಯಾಜ್ಯ ನಿರ್ವಹಣಾ ನಿಯಮಾವಳಿ, 2016ರ 19ನೇ ತಿದ್ದುಪಡಿಯ ಪ್ರಕಾರ, ಇಂಥ ಪ್ಯಾಕೇಜಿಂಗುಗಳನ್ನು ಮರುಬಳಕೆ ಮಾಡುವುದಕ್ಕೆ ಇರುವ ಒಂದು ಮಾರ್ಗವೆಂದರೆ ಅವುಗಳನ್ನು ಸಿಮೆಂಟ್ ಗೂಡುಗಳಲ್ಲಿ ಇಂಧನವನ್ನಾಗಿ ಬಳಸುವುದು. ಈ ಪ್ರಕ್ರಿಯೆಯನ್ನು “ಸಹ-ಸಂಸ್ಕರಣೆ” ಎಂದು ಕರೆಯಲಾಗುತ್ತದೆ.

ಇನ್ನಷ್ಟು ಓದಿ

ತ್ಯಾಜ್ಯವು ಪರಿಸರದ ಮೇಲೆ ಬೀರುವ ಪ್ರಭಾವವೇನು?

ನಮ್ಮ ಮನೆಗಳು, ಕಛೇರಿಗಳು, ಹೋಟೆಲುಗಳು ಮತ್ತು ಎಲ್ಲ ಕಡೆಗಳಲ್ಲಿ ಉಂಟಾಗುವ ತ್ಯಾಜ್ಯವನ್ನು ಸಂಗ್ರಹಿಸಿ, ಪ್ರಕಾರವಾರು ಪ್ರತ್ಯೇಕಿಸಿ ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡದೇ ಇದ್ದರೆ ಅದು ಇಲ್ಲವೇ ಡಂಪಿಂಗ್ ಭೂಭರ್ತಿಗಳನ್ನು ತಲುಪುತ್ತದೆ ಅಥವಾ ಜಲಮೂಲಗಳನ್ನು ಸೇರಿಕೊಳ್ಳುತ್ತದೆ. ಭೂಭರ್ತಿಗಳಲ್ಲಿ ಅಸ್ತವ್ಯಸ್ಥವಾಗಿ ಗುಡ್ಡೆ ಹಾಕಿರುವ ತ್ಯಾಜ್ಯದಿಂದ ಕಾರ್ಬನ್ ಡೈ ಆಕ್ಸೈಡ್ ಮತ್ತು ಮೀಥೇನಿನಂಥ ವಿಷಕಾರಿ ಅನಿಲಗಳು ಉತ್ಪಾದಿತವಾಗುತ್ತವೆ. ಭೂಭರ್ತಿಗಳಿಂದ ನೀರು ಭೂಮಿಯೊಳಗೆ ಒಸರುತ್ತದೆ, ಅದು ಅಂತರ್ಜಲವನ್ನು ತಲುಪುವ ಮುನ್ನ ವಿಷಕಾರಿ ವಸ್ತುಗಳಿಂದ ಕಲುಷಿತಗೊಳ್ಳುತ್ತದೆ. ಆ ಪ್ರದೇಶದಲ್ಲಿನ ಮಣ್ಣೂ ವಿಷಕಾರಿ ವಸ್ತುಗಳನ್ನು ಒಸರಿಸುತ್ತದೆ.

ಇನ್ನಷ್ಟು ಓದಿ

ತ್ಯಾಜ್ಯ ಆಯುವವರು ಮತ್ತು ಪೌರಕಾರ್ಮಿಕರು ಅಥವಾ ಸಫಾಯಿ ಕರ್ಮಚಾರಿಗಳ ನಡುವಿನ ವ್ಯತ್ಯಾಸವೇನು?

ಬೀದಿ, ಕಸದ ತೊಟ್ಟಿಗಳು ಮತ್ತು ಇತರ ಸಾಮಗ್ರಿಗಳನ್ನು ಪುನಃಪಡೆಯುವ ಸೌಲಭ್ಯಗಳಿಂದ ಮರುಬಳಕೆ ಮತ್ತು ಪುನರುತ್ಪಾದನೆಗೆ ಯೋಗ್ಯವಾದ ತ್ಯಾಜ್ಯವನ್ನು ತನ್ನ ಪಾಡಿಗೆ ತಾನು ಅನೌಪಚಾರಿಕವಾಗಿ ಸಂಗ್ರಹ ಮಾಡುವ ವ್ಯಕ್ತಿಯನ್ನು ತ್ಯಾಜ್ಯ ಆಯುವವರು ಎನ್ನುತ್ತೇವೆ. ಇವರು ತ್ಯಾಜ್ಯವನ್ನು ಸ್ವಚ್ಛ ಮಾಡಿ, ವಿಂಗಡಣೆ ಮಾಡಿ ತಾವೇ ನೇರವಾಗಿ ಅಥವಾ ಮಧ್ಯವರ್ತಿಗಳ ಮೂಲಕ ಪುನರುತ್ಪಾದಕರಿಗೆ ಮಾರಿ ತಮ್ಮ ಜೀವನವನ್ನು ನಡೆಸುತ್ತಾರೆ.

ಇನ್ನಷ್ಟು ಓದಿ

ತ್ಯಾಜ್ಯ ಆಯುವವರು ಯಾರು?

ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ 15,00,000ರಿಂದ 40,00,000 ಸಂಖ್ಯೆಯಲ್ಲಿ ತ್ಯಾಜ್ಯ ಅಯುವವರಿದ್ದಾರೆ [1]ನಮ್ಮ ಅಂದಾಜಿನ ಪ್ರಕಾರ ಬೆಂಗಳೂರಿನಲ್ಲಿ 25,000ಕ್ಕೂ ಹೆಚ್ಚು ಜನ ತ್ಯಾಜ್ಯ ಆಯುವವರಿದ್ದಾರೆ, ದೆಹಲಿಯಲ್ಲಿ ಅವರ ಸಂಖ್ಯೆ ಸುಮಾರು 5,00,000.

ತ್ಯಾಜ್ಯ ಆಯುವವರು ಅನೌಪಚಾರಿಕ ಆರ್ಥಿಕತೆಯ ಭಾಗವಾಗಿರುವ ಸ್ವಯಂಉದ್ಯೋಗಿಗಳು; ಇವರು ನಗರದ ಘನ ತ್ಯಾಜ್ಯದಿಂದ ಪುನರುತ್ಪಾದನೆಗೆ ಯೋಗ್ಯವಾದ ತ್ಯಾಜ್ಯವಸ್ತುಗಳನ್ನು ಸಂಗ್ರಹಿಸಿ, ಮಾರಿ ತಮ್ಮ ಜೀವನವನ್ನು ನಡೆಸುತ್ತಾರೆ. ವಸ್ತುಗಳ ಬಳಕೆದಾರರ ದೃಷ್ಟಿಯಲ್ಲಿ ಏನೂ ಬೆಲೆಯಿಲ್ಲವೆಂದು ಬಿಸಾಕಿದ ವಸ್ತುಗಳನ್ನು ಸಂಗ್ರಹಿಸಿ, ಸಂಗ್ರಹಣೆ, ವಿಂಗಡಣೆ, ಶ್ರೇಣೀಕರಣ ಮತ್ತು ಸಾಗಣೆ ಈ ರೀತಿ ತಮ್ಮ ಪರಿಶ್ರಮದ ಮೂಲಕ ಅವುಗಳನ್ನು ಬೆಲೆಗೆ ಮಾರಬಹುದಾದ ಸಾಮಗ್ರಿಯನ್ನಾಗಿ ಪರಿವರ್ತಿಸುತ್ತಾರೆ. [2].

ತ್ಯಾಜ್ಯಉತ್ಪಾದನೆಯಮೂಲದಿಂದಮರುಬಳಕೆಮಾಡಬಹುದಾದಮತ್ತುಪುನರುತ್ಪಾದನೆ ಮಾಡಬಹುದಾದಘನತ್ಯಾಜ್ಯವನ್ನುಸಂಗ್ರಹಿಸುವ ಮತ್ತು ಮರುಪಡೆದುಕೊಳ್ಳುವ ಕಾರ್ಯದಲ್ಲಿ ಅನೌಪಚಾರಿಕವಾಗಿತೊಡಗಿಸಿಕೊಂಡಿರುವವ್ಯಕ್ತಿಅಥವಾವ್ಯಕ್ತಿಗಳಗುಂಪುಗಳೆಂದು ಖ್ಯಾನಿಸಲಾಗಿದೆ. ಇವರು, ಬೀದಿಗಳು, ತೊಟ್ಟಿಗಳು, ತ್ಯಾಜ್ಯದಿಂದ ಉಪಯುಕ್ತ ವಸ್ತುಗಳನ್ನು ಮರುಪಡೆಯುವ ಸೌಲಭ್ಯಗಳು, ಸಂಸ್ಕರಣೆ ಮತ್ತು ತ್ಯಾಜ್ಯ ವಿಲೇವಾರಿ ಸೌಲಭ್ಯಗಳಿಂದ ವಸ್ತುಗಳನ್ನು ಸಂಗ್ರಹಿಸಿ ಪುನರುತ್ಪಾದಕರಿಗೆ ನೇರವಾಗಿ ಅಥವಾ ಮಧ್ಯವರ್ತಿಗಳ ಮೂಲಕ ಮಾರಿ ಹೊಟ್ಟೆಹೊರೆಯುತ್ತಾರೆ.

ಈ ಸಮುದಾಯದೊಂದಿಗೆ ಸುಮಾರು 10 ವರ್ಷಗಳ ಕಾಲ ತೊಡಗಿಸಿಕೊಂಡು ಕೆಲಸ ಮಾಡಿದ ನಂತರ, ಹಸಿರು ದಳ ಇವರಿಗಾಗಿ ತ್ಯಾಜ್ಯ ಆಯುವವರು ಅಥವಾ ತ್ಯಾಜ್ಯಕರ್ಮಿಗಳು ಎನ್ನುವ ಪದಗಳನ್ನು ಬಳಸುವುದನ್ನು ಇನಾದರೂ ಕೈಬಿಡಬೇಕು ಎಂದು ಮನಗಂಡಿತು. ಇಂಥ ಹೆಸರುಗಳಲ್ಲಿ ಈ ಕ್ಷೇತ್ರದಲ್ಲಿ ಅಗತ್ಯವಾದ ಕೌಶಲಗಳೆಲ್ಲವನ್ನೂ ಒಳಗೊಳ್ಳುವುದಿಲ್ಲ ಅಥವಾ ಈ ಸಮುದಾಯದ ಕಾಯಕದ ಘನತೆಯನ್ನು ಗುರುತಿಸುವುದಿಲ್ಲ. ಸರಿಯಾದ ಸಮಯಕ್ಕೆ ಈ “ತ್ಯಾಜ್ಯ ಆಯುವವರನ್ನು” ಮಹತ್ವದ ಸಾರ್ವಜನಿಕ ಸೇವೆಯನ್ನು ಒದಗಿಸುವ ನುರಿತ ಮತ್ತು ಬುದ್ಧಿವಂತ ಸಂಪನ್ಮೂಲ ಪುನಸ್ಸಂಪಾದಿಸುವ ಉದ್ಯಮಿಗಳು ಎಂಬಂತೆ ಗುರುತಿಸಲಾಗುವುದು ಎಂಬ ಆಶಯ ನಮಗಿದೆ.

[1] Why Ragpickers, Unrecognised And Unpaid, Are Critical For Waste Management In India
[2] Alliance of Indian Waste pickers, unpublished document

ಕೂದಲು ಆಯುವವರು

ಕೂದಲು ಆಯುವವರು ಎಂದರೆ, ಮನೆಗಳು, ಬೀದಿಗಳು, ಸಲೂನುಗಳು ಅಥವಾ ಧಾರ್ಮಿಕ ಸ್ಥಳಗಳಲ್ಲಿ ಬಿಸಾಕಿರುವ ಅಥವಾ ಕ್ಷೌರ ಮಾಡಿ ತ್ಯಜಿಸಿರುವ ಕೂದಲನ್ನು ಸಂಗ್ರಹಿಸುವ ತ್ಯಾಜ್ಯ ಆಯುವವರು. ಇವರು ನಿರ್ದಿಷ್ಟವಾಗಿ ಮಾನವ ಕೂದಲುಗಳನ್ನು ಸಂಗ್ರಹಿಸಿ ಮತ್ತು ಪಡೆದುಕೊಂಡು ತಮ್ಮ ಹೊಟ್ಟೆ ಹೊರೆಯಲು ಅದನ್ನು ಮಾರುತ್ತಾರೆ. ಇವರು ಸಂಗ್ರಹಿಸಿದ ಕೂದಲನ್ನು ವಿಂಗಡಿಸಿ, ಶ್ರೇಣೀಕರಿಸಿ ಐಷಾರಾಮಿ ಮಾರುಕಟ್ಟೆಗೆ ಮಾರುತ್ತಾರೆ.

ಮೂಳೆ ಆಯುವವರು

ಈ ತ್ಯಾಜ್ಯ ಆಯುವವರು ಬೀದಿ ಮತ್ತು ಕಸಾಯಿಖಾನೆಗಳಿಂದ ಪ್ರಾಣಿಗಳ ಮೂಳೆಗಳನ್ನು ಸಂಗ್ರಹಿಸಿಕೊಂಡು ಮಾರಿ ಜೀವನ ನಡೆಸುತ್ತಾರೆ. ಇವರು ಮೂಳೆಗಳನ್ನು ಸಂಗ್ರಹಿಸಿಕೊಂಡು, ಅವುಗಳನ್ನು ವಿಂಗಡಿಸಿ, ಶ್ರೇಣೀಕರಿಸಿ ಮಾರುಕಟ್ಟೆಯಲ್ಲಿ ಮಾರುತ್ತಾರೆ. (ಕೆ.ಜಿ.ಗೆ ರೂ.0.50 ಅಥವಾ 1990ರಲ್ಲಿ 16-ಲೀಟರ್ ಎಣ್ಣೆ ಡಬ್ಬಿಯ ತುಂಬ ಮೂಳೆಗೆ ರೂ.15). ಮೂಳೆಗಳನ್ನು ಆಯುವವರು ನಂತರ ಬೀದಿಗಳಿಂದ ಕಲ್ಲಿದ್ದಲನ್ನು ಆಯ್ದುಕೊಂಡು ಸ್ಥಳೀಯ ಹೋಟೆಲುಗಳಿಗೆ ಮಾರುತ್ತಿದ್ದರು, ಹೋಟಲಿನವರು ಅದನ್ನು ಇಂಧನದ ರೀತಿಯಲ್ಲಿ ಬಳಸುತ್ತಿದ್ದರು (ಒಂದು ಟಿನ್ ತುಂಬ ಕಲ್ಲಿದ್ದಲಿಗೆ ರೂ.2.50).

ತ್ಯಾಜ್ಯ ಆಯುವವರ ಕುರಿತು ಏಕೆ ಗಮನಹರಿಸಬೇಕು?

ಸಾಂಪ್ರದಾಯಿಕವಾಗಿ, ತ್ಯಾಜ್ಯ ಆಯುವವರು ಅಥವಾ ಕಸವನ್ನು ಸಂಗ್ರಹಿಸುವವರು ಅಥವಾ ಅದರೊಂದಿಗೆ ಕೆಲಸ ಮಾಡುವವರು ಉಪೇಕ್ಷಿತ ಮತ್ತು ನಿರಾಕೃತ ಸಮುದಾಯದವರಾಗಿದ್ದಾರೆ. ಶತಮಾನಗಳಿಂದ ತ್ಯಾಜ್ಯ ಅಯುವವರು ತಮ್ಮದೇ ಆದ ಯಾವುದೇ ಸಮಾಜಿಕ ಗುರುತು ಅಥವಾ ಹಕ್ಕುಗಳಿಲ್ಲದ ಅಗೋಚರ ಆರ್ಥಿಕತೆಯ ಭಾಗವಾಗಿದ್ದಾರೆ. ಹೆಚ್ಚಿನ ತ್ಯಾಜ್ಯ ಆಯುವವರು ವಸತಿ, ಶಿಕ್ಷಣ ಅಥವಾ ಆರೋಗ್ಯ ಸೇವೆ ಮುಂತಾದ ಮೂಲಭೂತ ಸಾಮಾಜಿಕ ಭದ್ರತೆ ಇಲ್ಲದ ಮಹಿಳೆಯರಾಗಿದ್ದಾರೆ.

  • Hasiru Dala  Wastepicker Stage 1

    ಮುಕ್ತವಾಗಿ ತಿರುಗಾಡುವವರು

    ದೈನಂದಿನ ಗಳಿಕೆ ಮಾಡುವವರಾಗಿ ಈಕೆ ಬೀದಿ ಮತ್ತು ಕಸದ ತೊಟ್ಟಿಗಳಿಂದ ಪುನರುತ್ಪಾದನೆಗೆ ಯೋಗ್ಯವಾದ ವಸ್ತುಗಳನ್ನು ಆಯ್ದುಕೊಂಡು ಮಾರಿ ಹೊಟ್ಟೆಹೊರೆಯುತ್ತಾಳೆ. ಈಕೆ ಸ್ವತಂತ್ರಳು, ತನ್ನ ಸಮಯಕ್ಕೆ ತಾನೇ ಮಾಲೀಕಳು.

  • Hasiru Dala Wastepicker Stage 2

    ವೃತ್ತಿಪರ ವ್ಯಕ್ತಿ

    ಗುತ್ತಿಗೆಯ ಆಧಾರದ ಮೇಲೆ ಸೇವೆಯನ್ನು ಒದಗಿಸುವವರು, ಉದಾಹರಣೆಗೆ, ಇವೆಂಟ್ ನಿರ್ವಹಣೆ. ಈಕೆ ತನ್ನ ಗ್ರಾಹಕರ ಅಗತ್ಯಗಳನ್ನು ಸೂಕ್ಷವಾಗಿ ಅರಿತವರು ಮತ್ತು ಸೇವೆಗಾಗಿ ಮಾಡಿಕೊಂಡಿರುವ ಒಪ್ಪಂದಕ್ಕೆ ಅಂಟಿಕೊಂಡು ಕೆಲಸ ಮಾಡುವವರು.

  • Hasiru Dala The Waste Ecosystem Wastepicker Stage 3

    ಅಧಿಕೃತಗೊಳಿಸಿದ್ದು

    ವಿಧಿಬದ್ಧವಾದ ಉದ್ಯೋಗಿ-ಉದ್ಯೋಗದಾತ ಸಂಬಂಧದಲ್ಲಿ ತೊಡಗಿರುವುದು. ಉದಾಹರಣೆಗೆ, ನೈರ್ಮಲ್ಯ ಕಾರ್ಯದಲ್ಲಿ ತೊಡಗಿರುವ ಪೌರಕಾರ್ಮಿಕರು. ಸರಕಾರ ಅಥವಾ ಖಾಸಗಿ ವಲಯದಲ್ಲಿ ಉದ್ಯೋಗಿ, ಅಥವಾ ಅಧಿಕೃತವಾಗಿ ನೋಂದಾಯಿಸಲಾದಕಾರ್ಮಿಕ ಕಾನೂನಿಗೆ ಮತ್ತು ತೆರಿಗೆ ನಿಯಮಗಳಿಗೆ ಬದ್ಧವಾದ ಸ್ವಂತ ವ್ಯವಹಾರವಿರುವುದು.

ತ್ಯಾಜ್ಯ ಆಯುವವರ ಕುರಿತು ಪ್ರಚಲಿತ ಕೆಲವು ಮಿಥ್ಯಗಳು

ಮಿಥ್ಯ: ತ್ಯಾಜ್ಯ ಆಯುವವರು ಕಳ್ಳರು

ಸತ್ಯ

ತ್ಯಾಜ್ಯ ಆಯುವವರು ದಣಿವರಿಯದೇ ಕಷ್ಟಪಟ್ಟು ಕೆಲಸ ಮಾಡುವ ಶ್ರಮಜೀವಿಗಳು. ನಮ್ಮ ದತ್ತಾಂಶಗಳ ಪ್ರಕಾರ, ಸುಸ್ಥಿರವಾದ ಆದಾಯವನ್ನು ಖಾತ್ರಿ ಮಾಡಿಕೊಳ್ಳುವ ಸಲುವಾಗಿ ಇವರು ಸಾಮಾನ್ಯವಾಗಿ ಪ್ರಾಥಃಕಾಲ 04 30ಕ್ಕೆ ಏಳುತ್ತಾರೆ; ಐದಾರು ಕಿ.ಮೀ. ಓಡಾಡಿ ನಗರವನ್ನು ಪುನರುತ್ಪಾದನೆಗೆ ಯೋಗ್ಯವಾದ ತ್ಯಾಜ್ಯಕ್ಕಾಗಿ ಜಾಲಾಡುತ್ತಾರೆ. ತ್ಯಾಜ್ಯ ಆಯುವುದು ಎಂದರೆ ಬಹಳ ಚತುರತೆಯ ಕಾರ್ಯ. ಪುನರುತ್ಪಾದನೆಯ ಸರಣಿಯಲ್ಲಿ ಮುಂದಕ್ಕೆ ಹೋಗುವ ಹಾಗೆ ಮಾರಾಟ ಮಾಡಲು ನೂರಾರು ಬಗೆಯ ತ್ಯಾಜ್ಯದಲ್ಲಿ ಯಾವುದನ್ನು ಆಯ್ದುಕೊಳ್ಳಬೇಕು, ಹೇಗೆ ವಿಂಗಡಿಸಬೇಕು ಎನ್ನುವುದಕ್ಕೆ ಗಂಟೆಗಟ್ಟಲೆ ಸಮಯ ಹಿಡಿಯುತ್ತದೆ. ತ್ಯಾಜ್ಯ ಆಯುವವರು ನಗರದ ಅರ್ಥಿಕತೆಯಲ್ಲಿ ಇದ್ದೂ ಇಲ್ಲದ ಹಾಗೆ ಅಗೋಚರವಾಗಿರುವ ಒಂದು ಸಮುದಾಯ.

ಮಿಥ್ಯ: ತ್ಯಾಜ್ಯ ಆಯುವವರು ಕಾಯಿಲೆಗಳನ್ನು ಹರಡುತ್ತಾರೆ

ಸತ್ಯ

ಇದಕ್ಕೆ ಮಿಥ್ಯಕ್ಕೆ ವಿರುದ್ಧವಾಗಿ, ತ್ಯಾಜ್ಯ ಆಯುವವರು ತಮ್ಮ ಕೆಲಸದಿಂದಾಗಿ ನಮ್ಮ ಬಡಾವಣೆಗಳಲ್ಲಿ ಕಾಯಿಲೆಗಳು ಹರಡದಂತೆ ಕಾಪಾಡುತ್ತಾರೆ. ಅವರ ಪರಿಶ್ರಮದ ಫಲವಾಗಿಯೇ ತ್ಯಾಜ್ಯವು ಕೊಳೆತು ನಾರುವುದಿಲ್ಲ, ನಗರದ ಚರಂಡಿಗಳಲ್ಲಿ ಬಿದ್ದು ಅವು ಕಟ್ಟಿಕೊಳ್ಳುವುದಿಲ್ಲ, ನೀರು ಸರಾಗವಾಗಿ ಹರಿಯುತ್ತದೆ, ಡೆಂಗ್ಯೂ ಮತ್ತು ಟೈಫಾಯ್ಡಿನಂಥ ಕಾಯಿಲೆಗಳು ಹರಡುವುದಿಲ್ಲ.

ಮಿಥ್ಯ: ತ್ಯಾಜ್ಯ ಆಯುವವರು ಭಿಕ್ಷುಕರು

ಸತ್ಯ

ತ್ಯಾಜ್ಯ ಆಯುವವರು, ಆಹಾರ, ಹಣಕ್ಕಾಗಿ ಹೋಗಲಿ, ತ್ಯಾಜ್ಯಕ್ಕಾಗಿಯೂ ಜನರನ್ನು ಬೇಡುವುದಿಲ್ಲ. ಇವರು ಘನ ತ್ಯಾಜ್ಯವನ್ನು ಬೀದಿಗಳು ಮತ್ತು ಕಸದ ತೊಟ್ಟಿಗಳಿಂದ ಆಯ್ದುಕೊಳ್ಳುತ್ತಾರೆ. ಸಾಮಾನ್ಯ ನಾಗರಿಕರು ತಮಗೆ ಬೇಡವೆಂದು ಬಿಸಾಕಿದ ವಸ್ತುಗಳಿಂದಲೇ ಅವರು ಉಪಯುಕ್ತವಾದುವನ್ನು ಆಯ್ದುಕೊಂಡು ತಮ್ಮ ಜೀವನವನ್ನು ನಡೆಸುತ್ತಾರೆ.

2012ರಲ್ಲಿ ಸಾಮಾಜಿಕ ನ್ಯಾಯದ ಸಚಿವಾಲಯವು, ನಾವು ಈ ಕುರಿತು ಸೂಕ್ತ ಹಸ್ತಕ್ಷೇಪ ಮಾಡುವ ಮುನ್ನ ಭಿಕ್ಷುಕರು/ತ್ಯಾಜ್ಯ ಆಯುವವರು ಎಂಬ ಪದಗಳನ್ನು ಪರ್ಯಾಯ ಪದಗಳಂತೆ ಬಳಸಿದ್ದರು. ನಾವು ಅದನ್ನು ಅವರಿಗೆ ಅರ್ಥ ಮಾಡಿಸಿದ್ದೇವೆ. ಸಮಾಜವು ಅವರ ಕಾಯಕವನ್ನು ಕೀಳಾಗಿ ಕಂಡರೂ ತ್ಯಾಜ್ಯ ಆಯುವವರು ತಮ್ಮ ವೃತ್ತಿಯಲ್ಲಿ ನುರಿತ ಕಾರ್ಮಿಕರು ಎಂಬುದು ಸತ್ಯ.

ತ್ಯಾಜ್ಯ ಆಯುವವರು ನಾಳೆ ಇದ್ದಕ್ಕಿದ್ದ ಹಾಗೆ ಕಾಣೆಯಾದರೆ ನಮ್ಮ ನಗರದ ಗತಿಯೇನಾಗುತ್ತದೆ?

ತ್ಯಾಜ್ಯ ಆಯುವವರನ್ನು ಅಧಿಕೃತ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಯಲ್ಲಿ ಒಂದು ಭಾಗವಾಗಿ ಕಾಣಲಾಗುವುದಿಲ್ಲ. ಆದರೂ ತ್ಯಾಜ್ಯ ನಿರ್ವಹಣೆಯಲ್ಲಿ ಅವರ ಕೊಡುಗೆ ಅಪಾರ.

ಆರ್ಥಿಕ

ಬೆಂಗಳೂರಿನಲ್ಲಿ ನಡೆಸಿದ ಒಂದು ಅಧ್ಯಯನದ ಪ್ರಕಾರ, ಒಂದು ವರ್ಷದಲ್ಲಿ ತ್ಯಾಜ್ಯ ಆಯುವವರ ಸಮುದಾಯವು ಸುಮಾರು 3,500 ಟನ್ನುಗಳಷ್ಟು ತ್ಯಾಜ್ಯ ಪ್ಲ್ಯಾಸ್ಟಿಕನ್ನು ಸಂಗ್ರಹಿಸಿ, ವಿಂಗಡಿಸಿ, ಪುನರುತ್ಪಾದನೆಗಾಗಿ ಮಾರುತ್ತಾರೆ; ಈ ಮೂಲಕ ಪ್ರತಿ ವರ್ಷ ಮುನಿಸಿಪಲ್ ಸ್ಥಳೀಯ ಸಂಸ್ಥೆಗಳಿಗೆ ಅಂಥ ತ್ಯಾಜ್ಯದ ಸಂಗ್ರಹಣೆ ಮತ್ತು ಸಾಗಣೆಗಾಗಿ ಆಗುವ 84 ಕೋಟಿ ರೂಪಾಯಿಯನ್ನು ಉಳಿಸುತ್ತಾರೆ.

ಪಾರಿಸರಿಕ

ಪರಿಸರ ಸಂರಕ್ಷಣೆಯ ದೃಷ್ಟಿಯಿಂದಲೂ ಇವರ ಸೇವೆ ನಗರಕ್ಕೆ ದೊಡ್ಡದೊಂದು ವರ- ತ್ಯಾಜ್ಯವು ಹೆಚ್ಚು ಹೆಚ್ಚು ಪುನರುತ್ಪಾದನೆ ಆಗುವುದರಿಂದ ವರ್ಜಿನ್ ಪ್ಲ್ಯಾಸ್ಟಿಕ್ ಬಳಕೆ ಕಡಿಮೆಯಾಗುತ್ತದೆ. ಈ ರೀತಿಯಲ್ಲಿ ಸಂಗ್ರಹಿಸಿ ಪುನರುತ್ಪಾದನೆಗೆ ಕಳಿಸಿಕೊಡಲಾಗುವ ಪ್ಲ್ಯಾಸ್ಟಿಕ್ ಸಹಜವಾಗಿಯೇ ಭೂಭರ್ತಿಗಳನ್ನು, ತ್ಯಾಜ್ಯ ಸುಡುವ ಸ್ಥಳಗಳನ್ನು, ನೀರಿನ ಆಕರಗಳನ್ನು ಸೇರುವುದಿಲ್ಲ, ಆ ಮೂಲಕ ಜಲ, ವಾಯು ಮತ್ತು ಭೂ ಮಾಲಿನ್ಯವನ್ನು ಅಷ್ಟರಮಟ್ಟಿಗೆ ತಡೆಗಟ್ಟುತ್ತದೆ.

ತ್ಯಾಜ್ಯ ಆಯುವವರ ಬದುಕಿನಲ್ಲಿ ಹಸಿರು ದಳದ ಪಾತ್ರವೇನು?

ಹಸಿರು ದಳ ತ್ಯಾಜ್ಯ ಆಯುವವರು ಮತ್ತು ಅನೌಪಚಾರಿಕ ತ್ಯಾಜ್ಯ ಆಯುವವರೊಂದಿಗೆ ಮತ್ತು ಅವರಿಗಾಗಿ ಕೆಲಸ ಮಾಡುತ್ತದೆ. 2011ರಲ್ಲಿ ಸ್ಥಾಪನೆಯಾದಾಗಿನಿಂದ ಇದು ತ್ಯಾಜ್ಯ ಆಯುವವರ ಬದುಕು ಮತ್ತು ಬದುಕುವ ಮಾರ್ಗಗಳನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಹಸಿರು ದಳ ತ್ಯಾಜ್ಯ ಕಾರ್ಮಿಕರು ಮತ್ತು ಸ್ಥಳೀಯ ಸರಕಾರಗಳು, ಕಾರ್ಯನೀತಿ ರಚಿಸುವವರು ಮತ್ತು ನಾಗರಿಕರು ಇಂಥ ಇತರ ಬಾಧ್ಯಸ್ಥರ ನಡುವಿನ ಅಂತರವನ್ನು ಹೋಗಲಾಡಿಸುವತ್ತ ಕ್ರಿಯಾಶೀಲವಾಗಿದೆ.

ಬೆಂಗಳೂರಿನಲ್ಲಿ ತ್ಯಾಜ್ಯ ಆಯುವುದು

ಬೆಂಗಳೂರಿನಲ್ಲಿ ಸುಮಾರು 35,000 ತ್ಯಾಜ್ಯ ಆಯುವವರು ಮತ್ತು ಸಂಚಾರಿ ಖರೀದಿದಾರರು ಇದ್ದಾರೆ. ಇಂಥ ತ್ಯಾಜ್ಯ ಆಯುವವರು ನಗರವು ಸ್ವಚ್ಛ ಮತ್ತು ನಿರ್ಮಲವಾಗಿ ಉಳಿಯುವಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತಾರೆ. ಇವರು ಘನತ್ಯಾಜ್ಯವನ್ನು ಸಂಗ್ರಹಿಸಿ, ಸೂಕ್ತವಾದವರಿಗೆ ಮಾರುತ್ತಾರೆ, ಇದರಿಂದಾಗಿ ನಗರದಲ್ಲಿರುವ ಪುನರುತ್ಪಾದನೆ ಉದ್ಯಮಕ್ಕೆ ಅಗತ್ಯವಾದ ಕಚ್ಚಾ ವಸ್ತುಗಳು ದೊರೆಯುತ್ತವೆ.

ಇನ್ನಷ್ಟು ಓದಿ
Kannada