International Union of Conservation of Nature ಪ್ರಕಾರ, “ಪ್ರತಿ ವರ್ಷ ಕನಿಷ್ಠ 80 ಲಕ್ಷ ಟನ್ನುಗಳಷ್ಟು ಪ್ಲ್ಯಾಸ್ಟಿಕ್ಕು ಸಾಗರಗಳನ್ನು ಸೇರುತ್ತದೆ, ಸಾಗರಗಳ ಮೇಲ್ಮೈಯಿಂದ ಹಿಡಿದು ಸಾಗರದಾಳದಲ್ಲಿರುವ ಕೆಸರಿನ ವರೆಗೆ ಇರುವ ಎಲ್ಲ ಸಮುದ್ರ ಅವಶೇಷಗಳಲ್ಲಿ 80%ನಷ್ಟು ಪ್ಲ್ಯಾಸ್ಟಿಕ್ ಆಗಿರುತ್ತದೆ.” ಈ ಪ್ಲ್ಯಾಸ್ಟಿಕ್ ಸಮುದ್ರ ಸಸ್ಯ ಮತ್ತು ಪ್ರಾಣಿಗಳ ಜೀವವನ್ನು ಸಾಯಿಸುತ್ತದೆ, ಇದನ್ನು ಮೀನುಗಳು ಸೇವಿಸುತ್ತವೆ ಮತ್ತು ಸಮುದ್ರದ ಜೀವವೈವಿಧ್ಯಕ್ಕೆ ಹೇಳಲಾಗದ ಹಾನಿಯನ್ನುಂಟಗುತ್ತದೆ.
ಸಾವಿರಾರು ಪ್ರವಾಸಿಗಳನ್ನು ಆಕರ್ಷಿಸುವ ಸಮುದ್ರ ತೀರಗಳಲ್ಲಿ ಪ್ಲ್ಯಾಸ್ಟಿಕ್ ಬ್ಯಾಗುಗಳು, ಬಾಟಲುಗಳು ಮತ್ತು ಆಹಾರದ ಧಾರಕಗಳು ಇತ್ಯಾದಿ ತ್ಯಾಜ್ಯವು ಹೆಚ್ಚಾಗಿರುತ್ತದೆ.
ತ್ಯಾಜ್ಯಆಯುವವರು ಈ ಪ್ಲಾಸ್ಟಿಕ್ ಸಮುದ್ರವನ್ನು ಸೇರುವ ಮುನ್ನ ಆಯ್ದುಕೊಳ್ಳುತ್ತಾರೆ. ಅದೇ ಹೊತ್ತಿಗೆ ಅದು ಅವರಿಗಾಗಿ ಜೀವನೋಪಾಯವನ್ನು ಸೃಷ್ಟಿಸುತ್ತದೆ ಮತ್ತು ಹೆಚ್ಚಿಸುತ್ತದೆ. ಕರಾವಳಿನಗರವಾದ ಮಂಗಳೂರಿನಲ್ಲಿ ನೇತ್ರಾವತಿ ಮತ್ತು ಗುರುಪುರನದಿಗಳು ಸಮುದ್ರದಲ್ಲಿ ವಿಲೀನಗೊಳ್ಳುತ್ತವೆ. ಈ ನದಿಗಳು ಸಾಂಪ್ರದಾಯಿಕವಾಗಿ ಕೃಷಿ ಮತ್ತು ಶುದ್ಧನೀರಿನ ಮೀನುಗಾರಿಕೆಗೆ ನೀರು ಮತ್ತು ಫಲವತ್ತಾದ ಮಣ್ಣನ್ನುನೀಡಿವೆ. ಆದಾಗ್ಯೂ, ನದಿಗಳು ಮತ್ತು ಸಮುದ್ರದಲ್ಲಿ ಹೆಚ್ಚಾಗಿರುವ ಪ್ಲಾಸ್ಟಿಕ್ನಿಂದಾಗಿ ನೀರುಕಲುಷಿತಗೊಳ್ಳುತ್ತದೆ.
26 ಜನವರಿ 2020ರಂದು ಆಂಟಿ ಪಲ್ಯೂಷನ್ ಡ್ರೈವ್ ಫೌಂಡೇಷನ್ ಮತ್ತು ಹಸಿರು ದಳ ಸೇರಿ 120 ಜನ ನಾಗರಿಕರ ನೆರವಿನೊಂದಿಗೆ ಸುಂದರವಾದ ಆ ಪ್ರದೇಶವನ್ನು ಸ್ವಚ್ಛಗೊಳಿಸಿದವು.
ಮಂಗಳೂರು ನೋಡಲು ಸ್ವಚ್ಛವಾದ ನಗರವಾಗಿ ಕಾಣುತ್ತದೆ-ಪ್ಲ್ಯಾಸ್ಟಿಕ್ ಮಾಲಿನ್ಯ ಎದ್ದುಕಾಣುವುದಿಲ್ಲ ಮತ್ತು ಬಹುದೊಡ್ಡ ಸಂಖ್ಯೆಯಲ್ಲಿ ಬಂದುಹೋಗುವ ಪ್ರವಾಸಿಗರಿಂದಾಗಿ ಜನರ ಭಾವನಾತ್ಮಕ ತೊಡಗುವಿಕೆ ಬಹಳ ಮಿತವಾಗಿರುತ್ತದೆ. ಕರಾವಳಿ ನಗರವು ಬಹಳ ಬಿಸಿಯಾಗಿರುತ್ತದೆ, ಹೀಗಾಗಿ ಪ್ರವಾಸಿಗರಷ್ಟೇ ಅಲ್ಲ ಸ್ಥಳೀಯರೂ ಬಾಟಲಿ ನೀರಿನ ಮೇಲೆ ಅವಲಂಬಿಸುತ್ತಾರೆ.
ಘನತ್ಯಾಜ್ಯನಿರ್ವಹಣೆಯು ಪ್ರಜ್ಞಾಪೂರ್ವಕವಾದ ಕಾಳಜಿಯಾಗಿರಬೇಕು ಮತ್ತು ಸಮರ್ಪಿತಯೋಜನೆ ಮತ್ತು ಜಾಗೃತಿಇಲ್ಲದೆ ಇದನ್ನು ಸಂಘಟಿಸಲು ಸಾಧ್ಯವಿಲ್ಲ. ಎಂದರೆ,ಮಂಗಳೂರಿನಲ್ಲಿ ಎಷ್ಟುತ್ಯಾಜ್ಯ ಉತ್ಪತ್ತಿಯಾಗುತ್ತದೆ, ಅದು ಎಲ್ಲಿಕೊನೆಗೊಳ್ಳುತ್ತದೆ, ಮತ್ತು ಆತ್ಯಾಜ್ಯವನ್ನು ಹೇಗೆಸುಸ್ಥಿರವಾಗಿ ನಿರ್ವಹಿಸಬಹುದು- ಎಂಬುದರ ಕುರಿತು ಅಧ್ಯಯನಗಳು – ಈಎಲ್ಲಾವಿಧಾನಗಳನ್ನು ಬುನಾದಿಯಿಂದಲೇ ನಿರ್ಮಿಸಬೇಕಾಗಿದೆ.
ಮನೆಮನೆಯಿಂದ ಪ್ರತ್ಯೇಕಿತ ತ್ಯಾಜ್ಯವನ್ನು ಸಂಗ್ರಹಿಸುವುದು ಮತ್ತು ತ್ಯಾಜ್ಯವನ್ನು ಸ್ಥಳೀಯವಾಗಿಯೇ ಸಂಸ್ಕರಿಸುವುದರಿಂದ ನೀರಿನ ಮೂಲಗಳ ಮಾಲಿನ್ಯವನ್ನು ಕಡಿಮೆ ಮಾಡಬಹುದು. ಬಂದುಹೋಗುವ ಪ್ರವಾಸಿಗರೂ ಸೇರಿದ ಹಾಗೆ ಎಲ್ಲರಲ್ಲಿಯೂ ಜಾಗೃತಿಯನ್ನು ಮೂಡಿಸುವುದು ಬಹಳ ಮುಖ್ಯ.
ನದಿಗಳಲ್ಲಿ ಮತ್ತು ನದಿಯ ದಂಡೆಯಗುಂಟ ತ್ಯಾಜ್ಯವನ್ನು ಎಸೆಯುವ 30 ಹಾಟ್ ಸ್ಪಾಟ್-ಗಳನ್ನು ಗುರುತಿಸಲು ವಿವರವಾದ ಸಮೀಕ್ಷೆಯನ್ನು ನಡೆಸಲಾಯಿತು. ಅವುಗಳಲ್ಲಿ ನಾವು ಒಂದು ಮಂಗಳೂರು ನಗರಪಾಲಿಕೆಯ ವ್ಯಾಪ್ತಿಯಲ್ಲಿ, ಇನ್ನೊಂದು ಉಲ್ಲಾಳ ನಗರಪಾಲಿಕೆ (ಸ್ಥಳೀಯ ಸಂಸ್ಥೆಗಳ) ವ್ಯಾಪ್ತಿಯಲ್ಲಿ- ಎರಡು ಹಾಟ್-ಸ್ಪಾಟ್-ಗಳನ್ನು ಕಾರ್ಯಾಚರಣೆಗಾಗಿ ಆಯ್ದುಕೊಂಡೆವು.
ಉಲ್ಲಾಳ ಸ್ಥಳೀಯ ಸಂಸ್ಥೆಗಳ ಜೊತೆಯಲ್ಲಿ ಹಲವಾರು ಬಾರಿ ಚರ್ಚಿಸಿದ ನಂತರ, ನಮಗೆ ಒಣ(ಅಜೈವಿಕ) ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ಮತ್ತು ಸಂಸ್ಕರಿಸಲು ಸಾಧ್ಯವಾಗಿದೆ. ಇದು ಒಂದು ಹೊಸ ತಂಡವನ್ನು ಸೃಷ್ಟಿಸಿದೆ-ಒಬ್ಬ ಉದ್ಯಮಿ ಮತ್ತು 4 ಜನ ನಿರೀಕ್ಷಿಸಬಹುದಾದ ಕೆಲಸಗಳನ್ನು ಹೊಂದಿದ್ದಾರೆ. ಈ ಕಾರ್ಯತಂತ್ರದಿಂದಾಗಿ ಜೀವನೋಪಾಯವು ಸೃಷ್ಟಿಯಾಗುತ್ತಿದೆ ಮತ್ತು ಪ್ಲ್ಯಾಸ್ಟಿಕ್ ಮಾಲಿನ್ಯವನ್ನು ಪರಿಹರಿಸಲಾಗುತ್ತಿದೆ.