ಜನಸಂಖ್ಯೆ ಹೆಚ್ಚಿದಂತೆಲ್ಲಾ ನಗರಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ಪ್ರಮಾಣವೂ ಹೆಚ್ಚಾಗುತ್ತಿದೆ. ಸ್ಥಳೀಯ ಸಂಸ್ಥೆಗಳ ಸಂಪನ್ಮೂಲಗಳು ಮತ್ತು ಮೂಲಭೂತ ಸೌಕರ್ಯಗಳ ತೀವ್ರ ಮಿತಿಯಿಂದಾಗಿ ಘನ ತ್ಯಾಜ್ಯದ ನಿರ್ವಹಣೆ ನಿರೀಕ್ಷಿತ ಗುಣಮಟ್ಟದ ಸೇವೆಯನ್ನು ಬಯಸುವ ನಗರಕ್ಕೆ ಮತ್ತು ನಾಗರಿಕರಿಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ.
ಇತರ ನಾಗರಿಕ ಸಮಸ್ಯೆಗಳಿಗಿಂತ ಭಿನ್ನವಾಗಿ, ಸುಸ್ಥಿರ ಘನ ತ್ಯಾಜ್ಯ ನಿರ್ವಹಣೆಗಾಗಿ ಸಮರ್ಪಕವಾದ ಕಾರ್ಯನೀತಿ, ಸುಸ್ಥಿರ ಸಂಸ್ಕರಣೆ, ನಾಗರಿಕರ ಸಹಭಾಗಿತ್ವ, ಹೊಸ ವಿಧಾನಗಳಿಗೆ ಸ್ಪಂದಿಸುವ ಅಧಿಕಾರಿಗಳು, ಮತ್ತು ಚುನಾಯಿತ ಪ್ರತಿನಿಧಿಗಳಿಂದ ಉತ್ತಮ ನಾಯಕತ್ವ - ಇವುಗಳ ಅವಶ್ಯಕತೆಯಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಇದನ್ನು ಸಾಧ್ಯವಾಗಿಸುವ ಈ ಎಲ್ಲ ಗುಣಗಳನ್ನು ಹೊಂದಿರುವ ಕೆಲವೇ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಂದಾಗಿದೆ.
ಕೋಕಿಲಾ ಒಂದು ಕಾಂಪೋಸ್ಟಿಂಗ್ ಘಟಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಕಾರ್ಯವಿಧಾನ, ಪ್ರಕ್ರಿಯೆಗಳು ಮತ್ತು ಸಾಮಗ್ರಿಗಳ ಕುರಿತು ಅವರಿಗಿರುವ ಪರಿಣತ ಜ್ಞಾನದಿಂದಾಗಿ, ಕೋಕಿಲಾಅವರು ನಮ್ಮ “ಕಾಂಪೋಸ್ಟ್ ಡಾಕ್ಟರ್” ಆಗಿದ್ದಾರೆ ಮತ್ತು ವಿಷಯ ಪರಿಣತರೂ ಆಗಿದ್ದಾರೆ.
ಬೇಡವೆಂದು ಬಿಸಾಕುವಂಥಾದ್ದು ಯಾವುದೂ ಇಲ್ಲ.
ಭೂಭರ್ತಿಗಳು ತಮ್ಮ ಸಾಮರ್ಥಕ್ಕಿಂತ ಹೆಚ್ಚು ಭರ್ತಿಯಾಗಿವೆ, ನೀರಿನ ಆಕರಗಳೆಲ್ಲವೂ ತ್ಯಾಜ್ಯದಿಂದ ಕಟ್ಟಿಕೊಂಡಿವೆ ಆದ್ದರಿಂದ ಆಯಾ ವಾರ್ಡುಗಳಲ್ಲಿ ಉತ್ಪತ್ತಿಯಾಗಿರುವ ತ್ಯಾಜ್ಯವನ್ನು ಆಯಾ ವಾರ್ಡುಗಳಲ್ಲಿಯೇ ಸಂಸ್ಕರಿಸಬೇಕು ಎನ್ನುವುದು ನಮ್ಮ ಗುರಿಯಾಗಿದೆ.
ತ್ಯಾಜ್ಯ ಸಂಸ್ಕರಣೆಯ ಕಾರ್ಯವನ್ನು ವಿಕೇಂದ್ರೀಕರಿಸಬೇಕು ಎಂಬ ಕಾರ್ಯತಂತ್ರಕ್ಕೆ ಎಲ್ಲ ಬಾಧ್ಯಸ್ಥರ ಸಮ್ಮತಿಯನ್ನು ಪಡೆಯುವುದು ದೀರ್ಘಕಾಲೀನ ಮತ್ತು ಬಹುದೊಡ್ಡ ಸವಾಲಿನ ಕಾರ್ಯವಾಗಿದೆ.
ಇದನ್ನು ಮಾಡುವುದಕ್ಕಾಗಿ, ಇದರಲ್ಲಿ ಒಳಗೊಳ್ಳುವ ಎಲ್ಲ ಬಗೆಯ ಬಾಧ್ಯಸ್ಥರ ನಡುವೆ ಉತ್ತಮತರ ಸಂವಹನದ ಅಗತ್ಯವಿದೆ:
ಹಸಿರು ದಳ ಶೂನ್ಯ ತ್ಯಾಜ್ಯ ಎಂಬ ಒಂದು ಉಪಕ್ರಮವನ್ನು ಆರಂಭಿಸಿದೆ, ಇದು ತ್ಯಾಜ್ಯವನ್ನು ಮೂಲದಲ್ಲಿಯೇ ಮೂರು ಬಗೆಯಲ್ಲಿ ಪ್ರತ್ಯೇಕಿಸುವುದರ ಕಡೆಗೆ ಹೆಚ್ಚು ಗಮನ ಹರಿಸುತ್ತದೆ: ನಾಗರಿಕರನ್ನು ಬದ್ಧತೆಯೊಂದಿಗೆ ತೊಡಗಿಸಿಕೊಳ್ಳುವುದು, ತ್ಯಾಜ್ಯದ ಸಂಸ್ಕರಣೆಯನ್ನು ವಿಕೇಂದ್ರೀಕರಿಸುವುದು, ತ್ಯಾಜ್ಯ ನಿರ್ವಹಣೆಯ ವ್ಯವಸ್ಥೆಯಲ್ಲಿ ತ್ಯಾಜ್ಯ ಆಯುವವರನ್ನು ಅಧಿಕೃತವಾಗಿ ಏಕೀಕರಿಸುವುದು. ತ್ಯಾಜ್ಯವು ಅದು ಉತ್ಪತ್ತಿಯಾದ ವಾರ್ಡಿನಿಂದ (ಆಡಳಿತ ವಿಭಾಗ) ಸಂಸ್ಕರಣೆಗಾಗಿ ಹೊರಗೆ ಹೋಗುವ ಪ್ರಮಾಣವನ್ನು ಕಡಿಮೆ ಮಾಡುವುದೇ ಇಲ್ಲಿನ ಉದ್ದೇಶ. ಶೂನ್ಯ ತ್ಯಾಜ್ಯ ಉಪಕ್ರಮವು ಬೆಂಗಳೂರಿನಲ್ಲಿ ಆರಂಭವಾಗಿದೆ, ಬಹಳ ಬೇಗನೇ ಮೈಸೂರು ಮತ್ತು ತುಮಕೂರಿನಲ್ಲಿಯೂ ಆರಂಭಿಸಲಾಗುವುದು.
ಶೂನ್ಯ ತ್ಯಾಜ್ಯ ಪ್ರಕ್ರಿಯೆಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ನಾವು ನಾಗರಿಕರ ಮನಸ್ಸನ್ನು ಗೆಲ್ಲಬೇಕಾಗುತ್ತದೆ; ತ್ಯಾಜ್ಯವನ್ನು ಮೂಲದಲ್ಲಿಯೇ ಪ್ರತ್ಯೇಕಿಸಲು, ವೈಯಕ್ತಿಕ ಮಟ್ಟದಲ್ಲಿ ತ್ಯಾಜ್ಯದ ಉತ್ಪತ್ತಿಯನ್ನೇ ಕಡಿಮೆ ಮಾಡುವುದು, ಮತ್ತು ಹಸಿ ಜೈವಿಕ ತ್ಯಾಜ್ಯವನ್ನು ಮನೆಯಲ್ಲಿಯೇ ಕಾಂಪೋಸ್ಟಿಂಗ್ ಮಾಡುವುದು ಇವುಗಳಲ್ಲಿ ನಾಗರಿಕ ಸಹಭಾಗಿತ್ವವನ್ನು ಗಳಿಸಿಕೊಳ್ಳಬೇಕು. ಘನ ತ್ಯಾಜ್ಯದ ನಿರ್ವಹಣೆಯ ಕುರಿತು ಕಲಿಯುವುದಕ್ಕಾಗಿ ಮಕ್ಕಳನ್ನು ಪ್ರೇರೇಪಿಸಲು ಟ್ರ್ಯಾಷೋನಾಮಿಕ್ಸ್ ಎಂಬ ಸ್ವಾರಸ್ಯಕರ ವಿಧಾನವನ್ನು ಅನುಸರಿಸಲಾಗುತ್ತಿದೆ.
ತ್ಯಾಜ್ಯದ ಸಂಗ್ರಹಣೆಯನ್ನು ಸುಗಮಗೊಳಿಸುವುದು, ಒಣ ತ್ಯಾಜ್ಯ ಸಂಗ್ರಹಣೆ ಕೇಂದ್ರಗಳ ಕಾರ್ಯಚಾಲನೆಯಲ್ಲಿ ತ್ಯಾಜ್ಯ ಆಯುವವನ್ನು ತೊಡಗಿಸಿಕೊಳ್ಳುವುದು, ಮತ್ತು ಪ್ರತ್ಯೇಕಿತವಾದ ಎಲ್ಲ ತ್ಯಾಜ್ಯದ ದತ್ತಾಂಶಗಳನ್ನು ನಿರ್ವಹಿಸುವುದಕ್ಕಾಗಿ ನಾಗರಿಕರು ಮತ್ತು ಅಧಿಕಾರಿಗಳೊಂದಿಗೆ ಕೆಲಸ ಮಾಡುವುದು, ಎಲ್ಲ ಬಗೆಯ ಬಾಧ್ಯಸ್ಥರ ಪರಿಶ್ರಮಗಳು ಯಾವ ರೀತಿಯಲ್ಲಿ ಸಕಾರಾತ್ಮಕ ಪ್ರಭಾವವನ್ನು ಬೀರಿದೆ ಎಂದು ಅರ್ಥ ಮಾಡಿಕೊಳ್ಳಲು ಸಮುದಾಯಕ್ಕೆ ಸಹಾಯವಾಗುತ್ತದೆ.
ಇಡೀ ಪ್ರಕ್ರಿಯೆಯನ್ನು ನಾವು ಸಾಂಸ್ಥೀಕರಿಸುವ ಆಶಯವನ್ನು ಇಟ್ಟುಕೊಂಡಿದ್ದೇವೆ; ಹಸಿರು ದಳ ಒಮ್ಮೆ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿದಾಗ, ಶೂನ್ಯ ತ್ಯಾಜ್ಯ ಪ್ರಕ್ರಿಯೆಯು ಸಮುದಾಯದ ಉಸ್ತುವಾರಿ ಮತ್ತು ಬದ್ಧತೆಯೊಂದಿಗೆ ಮುಂದುವರಿಯಬೇಕು ಎನ್ನುವುದೇ ಇಲ್ಲಿನ ಉದ್ದೇಶ.
ವಾರ್ಡ್ 177, ಉತ್ತರ ಬೆಂಗಳೂರಿನ ಜೆ.ಪಿ.ನಗರ ಒಂದು ವಾರ್ಡು. ಇಲ್ಲಿನ ಮಹಿಳಾ ಶಾಸಕರಿಗೆ ಪರಿಸರದ ಸಮಸ್ಯೆಗಳ ಕುರಿತು, ಅದರಲ್ಲೂ ಮುಖ್ಯವಾಗಿ ತ್ಯಾಜ್ಯದ ಸುಸ್ಥಿರ ನಿರ್ವಹಣೆಯ ಕುರಿತು ತುಂಬಾ ಕಾಳಜಿ ಇತ್ತು. ಅವರ ಆಹ್ವಾನದ ಮೇರೆಗೆ ನಾವು ಶೂನ್ಯ ತ್ಯಾಜ್ಯದ ವಾರ್ಡಿನ ಉಪಕ್ರಮವನ್ನು ಇಲ್ಲಿಂದಲೇ ಆರಂಭಿಸಿದೆವು. ಇದಾದ ಸುಮಾರು ಒಂದು ವರ್ಷದ ನಂತರ -