ತ್ಯಾಜ್ಯ ನಿರ್ವಹಣೆ ಕ್ಷೇತ್ರದಲ್ಲಿ ಸುಸ್ಥಿರತೆಯನ್ನು ತರಲು ಇರುವ ಒಂದು ಮುಖ್ಯ ಮಾರ್ಗವೆಂದರೆ ತ್ಯಾಜ್ಯ ನಿರ್ವಹಣೆಯನ್ನು ವಿಕೇಂದ್ರೀಕರಿಸುವುದು. ಘನ ತ್ಯಾಜ್ಯ ನಿರ್ವಹಣೆ ನಿಯಮಗಳು 2016, ತ್ಯಾಜ್ಯ ಸಂಸ್ಕರಣೆಯನ್ನು ವಿಕೇಂದ್ರೀಕರಿಸುವುದು, ತ್ಯಾಜ್ಯದ ಉತ್ಪತ್ತಿಯನ್ನು ಕಡಿಮೆ ಮಾಡುವುದು, ಪ್ಲ್ಯಾಸ್ಟಿಕ್ ನಿಷೇಧ ಮತ್ತು ಅಧಿಕೃತ ಇಲೆಕ್ಟ್ರಾನಿಕ್ ತ್ಯಾಜ್ಯ ನಿರ್ವಹಣೆಯನ್ನು ಸಮರ್ಥಿಸುತ್ತದೆ.
ತ್ಯಾಜ್ಯವನ್ನು ಕಾಂಪೋಸ್ಟ್ ಮತ್ತು ಬಯೋಗ್ಯಾಸ್ ಉತ್ಪಾದನೆ ವಿಚಾರ ಸರಕಾರಿ ಅಧಿಕಾರಿಗಳಿಗೆ ಕಲಿಯಲು ಸುಲಭವಾಗಿತ್ತು; ಆದರೆ ಅಜೈವಿಕ ತ್ಯಾಜ್ಯವನ್ನು ನಿರ್ವಹಿಸುವುದು ಅವರಿಗೆ ದೊಡ್ದ ಸವಾಲಾಗಿತ್ತು. ಪ್ಯಾಕೆಜಿಂಗ್ ಸಾಮಗ್ರಿ ಎಷ್ಟೊಂದು ಸಂಕೀರ್ಣವಾಗುತ್ತಿದೆ ಎಂದರೆ ಅದನ್ನು ದೈನಂದಿನವಾಗಿ ನಿರ್ವಹಿಸುವುದು ಕಠಿಣವಾಗುತ್ತಿದೆ. ಶಾಸಕರು ತಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಬೇಕು ಮತ್ತು ತಮ್ಮ ನೆರೆಹೊರೆಯಲ್ಲಿ ಸಕಾರಾತ್ಮಕ ಬದಲಾವಣೆ ತರುವ ಸಲುವಾಗಿ ಅವರು ಸಾರ್ವಜನಿಕರನ್ನು ಅದರಲ್ಲಿ ತೊಡಗಿಸಿಕೊಳ್ಳಬೇಕಾಗಿದೆ.
ಹಸಿರು ದಳ ಸಾಮಾಜಿಕ ಭದ್ರತೆಯನ್ನು ಸರಕಾರ ನೀಡುವ ಭರವಸೆ ಮತ್ತು ಬದುಕಲು ಸಾಕಾಗುವಷ್ಟು ಆದಾಯವಿಲ್ಲದಲ್ಲಿ ಜೀವನೋಪಾಯವನ್ನು ಬೆಂಬಲಿಸುತ್ತದೆ ಎಂದು ನಂಬುತ್ತದೆ.
ತ್ಯಾಜ್ಯ ನಿರ್ವಹಣೆಯ ಸಮರ್ಥವಾದ ಸೇವೆಗಳನ್ನು ನೀಡುವಲ್ಲಿ ಸ್ಥಳೀಯ ಸರಕಾರಗಳು ಸೋತಿರುವಾಗ ತ್ಯಾಜ್ಯ ಆಯುವವರು ಮತ್ತು ಅನೌಪಚಾರಿಕ ತ್ಯಾಜ್ಯ ಕಾರ್ಮಿಕರು ಆ ನ್ಯೂನತೆಯನ್ನು ತುಂಬಿದ್ದಾರೆ.
ಇದು ತ್ಯಾಜ್ಯ ಆಯುವವರು ತ್ಯಾಜ್ಯದಿಂದ ಪುನರುತ್ಪಾದನೆಗೆ ಯೋಗ್ಯವಾದ ವಸ್ತುಗಳನ್ನು ಸಂಗ್ರಹಿಸುವ ಕೆಲಸವನ್ನು ಸುಲಭಗೊಳಿಸಿದೆ; ಅವರೂ ತಾವು ಕೆಲಸ ಮಾಡುವ ಶೈಲಿಯನ್ನು ಬದಲಾಯಿಸಿಕೊಳ್ಳಬೇಕಾಗಿದೆ.
ಮೊದಲು ಸ್ವತಂತ್ರವಾಗಿ ಓಡಾಡಿಕೊಂಡು ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಿದ್ದ ಉದ್ಯಮಿಗಳಿಂದ ಈಗ ಸೇವಾದಾತರ ಪಾತ್ರವನ್ನು ವಹಿಸಬೇಕಾಗಿದೆ, ಇದಕ್ಕೆ ಬೇರೆ ತರದ ಶಿಸ್ತು ಬೇಕು; ತ್ಯಾಜ್ಯ ಉತ್ಪಾದಿಸುವವರೊಂದಿಗೆ ತೊಡಗಿಸಿಕೊಳ್ಳಬೇಕು ಮತ್ತು ಉದ್ಯೋಗಿ ಮತ್ತು ಉದ್ಯೋಗದಾತ ಸಂಬಂಧದಲ್ಲಿ ತೊಡಗಬೇಕು.
ಈ ಪರಿವರ್ತನೆ ತ್ಯಾಜ್ಯ ಆಯುವವರಿಗೆ ಸ್ವಲ್ಪ ಕಠಿಣ ಅನ್ನಿಸಬಹುದು. ಆದರೆ, ಅವರು ಸೂಕ್ತ ರೀತಿಯಲ್ಲಿ ಬದಲಾವಣೆ ಹೊಂದದೇ ಇದ್ದರೆ ಅವರಿಗೆ ಜೀವನೋಪಾಯ ದೊರೆಯುವುದಿಲ್ಲ.
ಬಹುದೊಡ್ಡ ಸವಾಲು ಎಂದರೆ ತ್ಯಾಜ್ಯ ಆಯುವವರಷ್ಟೇ ಅಲ್ಲ, ತ್ಯಾಜ್ಯದ ಇಡೀ ನಿರ್ವಹಣೆಯಲ್ಲಿ ಒಳಗೊಂಡಿರುವ ಎಲ್ಲರೂ ತಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳಬೇಕಾಗಿದೆ. ಹೌದು, ಹೇಳುವುದು ಸುಲಭ, ಮಾಡುವುದು ಕಷ್ಟ. ಇದು ಸಮಯ ಹಿಡಿಯುವ ಕೆಲಸ, ಆದರೆ ಇದನ್ನು ತುರ್ತಾಗಿ ಮಾಡಬೇಕಾಗಿದೆ.
ಅಗತ್ಯವಾದ ಬದಲಾವಣೆಯನ್ನು ತರಲು, ಮತ್ತು ಅನುಷ್ಠಾನದಲ್ಲಿ ಬಲವಾದ ನಿಯತತೆಯನ್ನು ತರಲು ಸೂಕ್ತ ಅರಿವು ಮತ್ತು ವೈಜ್ಞಾನಿಕ ತಿಳಿವಳಿಕೆ ಬೇಕಾಗುತ್ತದೆ, ಇದನ್ನು ಸಾಕಾರಗೊಳಿಸಲು ತರಬೇತಿ ಅತ್ಯಂತ ಸತ್ವಯುತವಾದ ಸಾಧನವಾಗಿದೆ.
ಹಸಿರು ದಳ ನಮ್ಮ ಎಲ್ಲ ಬಗೆಯ ಬಾಧ್ಯಸ್ಥರಿಗೆ ತರಬೇತಿಯನ್ನು ನೀಡುತ್ತದೆ: ತ್ಯಾಜ್ಯ ಆಯುವವರು, ನಾಗರಿಕರು, ಸರಕಾರಿ ಅಧಿಕಾರಿಗಳು, ವಿದ್ಯಾರ್ಥಿಗಳು ಮತ್ತು ಇತರರು.
ತ್ಯಾಜ್ಯ ವಲಯದಲ್ಲಿ ಸೃಜನಶೀಲತೆ, ನವೋತ್ಸಾಹ ಮತ್ತು ನವೀನಶೀಲತೆಯನ್ನು ತರುವುದೇ ನಮ್ಮ ಆಶಯ. ತ್ಯಾಜ್ಯ ಆಯುವವರನ್ನು ಒಳಗೊಂಡಂತೆ ಸುಸ್ಥಿರವಾದ ತ್ಯಾಜ್ಯ ನಿರ್ವಹಣೆಯನ್ನು ಅಭ್ಯಾಸ ಮಾಡಲು ಪೂರಕವಾದ ಪರಿಸರವ್ಯವಸ್ಥೆಯನ್ನು ಸೃಷ್ಟಿಸುತ್ತದೆ.
ನಾಗರಿಕರ ಮಟ್ಟಿಗೆ ನಾವು ಮನೆಯಲ್ಲಿ ತ್ಯಾಜ್ಯವನ್ನು ಪ್ರತ್ಯೇಕಿಸುವುದು ಹೇಗೆ ಎಂಬುದರ ಕುರಿತು ಅರಿವು ಮೂಡಿಸಿ, ಸುಸ್ಥಿರವಾದ ಮನೆಯಲ್ಲಿಯೇ ಕಾಂಪೋಸ್ಟ್ ಮಾಡುವ ವಿಧಾನದಲ್ಲಿ ತರಬೇತಿಯನ್ನು ನೀಡುತ್ತೇವೆ. ತ್ಯಾಜ್ಯವನ್ನು ಕಡಿಮೆ ಮಾಡುವುದು ಹೇಗೆ, ತ್ಯಾಜ್ಯ ನಿರ್ವಹಣೆಯಲ್ಲಿ ತ್ಯಾಜ್ಯ ಆಯುವವರ ಪಾತ್ರದ ಮಹತ್ವವೇನು ಮುಂತಾದ ವಿಚಾರಗಳ ಬಗ್ಗೆಯೂ ಅವರನ್ನು ಮಾತಾಡಿಸುತ್ತೇವೆ. ನಾವು ತಮ್ಮ ಮನೆಯಲ್ಲಿ ತಮ್ಮ ತ್ಯಾಜ್ಯವನ್ನು ನಿರ್ವಹಿಸಿಕೊಳ್ಳುವುದು ಹೇಗೆ ಎಂಬುದರಿಂದ ಹಿಡಿದು ನೆರೆಹೊರೆಯಲ್ಲಿ ತ್ಯಾಜ್ಯ ನಿರ್ವಹಣೆಯ ಪರಿಹಾರದಲ್ಲಿ ಭಾಗವಹಿಸುವುದು ಹೇಗೆ ಎನ್ನುವವರೆಗೆ ನಾಗರಿಕರಿಗೆ ತರಬೇತಿ ನೀಡುತ್ತೇವೆ.
ಸರಕಾರಿ ಅಧಿಕಾರಿಗಳಿಗೆ, ತಳಮಟ್ಟದಲ್ಲಿ ಕೆಲಸ ಮಾಡಿರುವ ಪರಿಣತರನ್ನು ತರಬೇತಿ ತರಗತಿಗೆ ಕರೆತರುತ್ತೇವೆ, ಅವರವರ ಸರಕಾರಿ ವ್ಯವಸ್ಥೆಯ ಒಳಗೆಯೇ ಮತ್ತು ಸಂಪನ್ಮೂಲಗಳ ಮಿತಿಯಲ್ಲಿಯೇ ತ್ಯಾಜ್ಯ ನಿರ್ವಹಣೆಗೆ ಇರುವ ಸಾಧ್ಯತೆಗಳನ್ನು ಅರ್ಥ ಮಾಡಿಸುತ್ತೇವೆ. ತ್ಯಾಜ್ಯ ನಿರ್ವಹಣೆಯಲ್ಲಿ ಅತ್ಯುತ್ತಮ ಅಭ್ಯಾಸಗಳ ಕುರಿತು ಅವರಿಗೆ ಹೇಳಿಕೊಟ್ಟು, ಅದನ್ನು ಅವರು ತಮ್ಮ ವಲಯದಲ್ಲಿ ಅನುಷ್ಠಾನಕ್ಕೆ ತರಲು ಪ್ರಯತ್ನಿಸುತ್ತಿರುವಾಗ ಅವರ ಜೊತೆ ನಿಂತು ಉತ್ತೇಜನ ಮತ್ತು ಮಾರ್ಗದರ್ಶನವನ್ನು ಒದಗಿಸಲಾಗುತ್ತದೆ.
ನಮ್ಮಲ್ಲಿ ಬರುವ ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಜ್ಞಾನ ಶಿಸ್ತುಗಳಿಂದ ವಿದ್ಯಾರ್ಥಿಗಳಿಗೆ ನಾವು ಅಧಿಕೃತವಾದ ಇಂಟರ್ನ್ಷಿಪ್ ಕೊಡುತ್ತೇವೆ. ನಾವು, ತ್ಯಾಜ್ಯ ವಿವಿಧ ಧಾರೆಗಳ ಸಂದರ್ಭದಲ್ಲಿ ವಿಶಿಷ್ಟ ಪರಿಹಾರಗಳನ್ನು ಕಂಡುಕೊಳ್ಳುವುದು, ತ್ಯಾಜ್ಯವನ್ನು ಸಂಗ್ರಹಿಸುವ ಕಾರ್ಯವಿಧಾನ, ದತ್ತಾಂಶ ನಿರ್ವಹಣೆ ಇತ್ಯಾದಿಗಳ ಕುರಿತು ಅವರ ಅರಿವು ಮತ್ತು ಉತ್ಸಾಹವನ್ನು ಹೆಚ್ಚಿಸುತ್ತೇವೆ. ಇದು ಅವರಿಗೆ ತ್ಯಾಜ್ಯ ನಿರ್ವಹಣೆಯಲ್ಲಿರುವ ಸವಾಲುಗಳು ಮತ್ತು ಅವುಗಳಿಗೆ ಇರುವ ಸುಸ್ಥಿರ ಪರಿಹಾರಗಳ ಪರಿಚಯವನ್ನು ನೀಡುತ್ತದೆ; ಮುಂದೆ ಅವರು ತ್ಯಾಜ್ಯ ನಿರ್ವಹಣೆಯ ಕ್ಷೇತ್ರದಲ್ಲಿ ವೃತ್ತಿಪರರಾಗುತ್ತಾರೆ, ಕ್ಷೇತ್ರಕ್ಕೆ ತಮ್ಮ ಪರಿಣತ ಸೇವೆಯನ್ನು ಒದಗಿಸುತ್ತಾರೆ ಎಂಬುದು ನಮ್ಮ ಆಶಯವಾಗಿದೆ.
ಹರಿಸು ದಳ ಯಾವುದೇ ಬಗೆಯ ತರಬೇತಿಯನ್ನು ನೀಡಲಿ ಎಲ್ಲದರ ಕೇಂದ್ರಬಿಂದು ಎಂದರೆ ತ್ಯಾಜ್ಯ ಆಯುವವರು, ಅವರಲ್ಲಿ ಒಬ್ಬರಾದರೂ ಸಂಪನ್ಮೂಲ ವ್ಯಕ್ತಿಯಾಗಿ ಇದರಲ್ಲಿ ಭಾಗವಹಿಸುತ್ತಾರೆ. ನಾವು ತರಬೇತಿ ಶಿಬಿರವನ್ನೂ ಶೂನ್ಯ ತ್ಯಾಜ್ಯ ಚಟುವಟಿಕೆಯನ್ನಾಗಿ ಮಾಡುತ್ತೇವೆ. ಹಸಿರು ದಳ ತರಬೇತಿಯು ಒತ್ತು ಇರುವುದು, ತ್ಯಾಜ್ಯ ಆಯುವವರು ಮತ್ತು ಇತರ ಅನೌಪಚಾರಿಕ ತ್ಯಾಜ್ಯ ಸಂಗ್ರಾಹಕರನ್ನು ಒಳಗೊಂಡ ಹಾಗೆ ಸುಸ್ಥಿರ ತ್ಯಾಜ್ಯ ನಿರ್ವಹಣೆಯಾಗಿದೆ.
ವೇಸ್ಟ್ ವೈಜ್ ಟ್ರಸ್ಟ್ ಮತ್ತು ಜೈನ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಹಸಿರು ದಳವು ಒಂದು ಸರ್ಟಿಫಿಕೇಟ್ ಕಾರ್ಯಕ್ರಮವನ್ನು ರೂಪಿಸಿದೆ. ಉದ್ದೇಶ: ಪುನರುತ್ಪಾದನೆ ಉದ್ಯಮದಲ್ಲಿ ಚಿಕ್ಕ ಉದ್ಯಮದಾರರ ಕೌಶಲವನ್ನು ವೃದ್ಧಿಸುವುದು. ಹಸಿರು ದಳ, ಜೈವಿಕ ತ್ಯಾಜ್ಯದ ನಿರ್ವಹಣೆ ಮತ್ತು ಟೆರೇಶ್ ತೋಟಗಾರಿಕೆಯ ಕುರಿತು ಒಂದು ಕೈಪಿಡಿಯನ್ನೂ ರೂಪಿಸಿದೆ. [link] ಅಲಯನ್ಸ್ ಆಫ್ ವೇಸ್ಟ್ ಪಿಕರ್ಸ್ ಸಹಯೋಗದಲ್ಲಿ ಮತ್ತು ನ್ಯಾಷನಲ್ ಸಫಾಯಿ ಕರ್ಮಚಾರಿ ಫೈನಾನ್ಸ್ ಡೆವೆಲಪ್ಮೆಂಟ್ ಕಾರ್ಪೋರೇಷನ್ ( NSKFDC) ಬೆಂಬಲದೊಂದಿಗೆ ಹಸಿರು ದಳವು ನಾಲ್ಕು ತರಬೇತಿ ಕೈಪಿಡಿಗಳನ್ನು ರೂಪಿಸಿದೆ.